Webdunia - Bharat's app for daily news and videos

Install App

ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಿತರಕ್ಷಣಾ ವೇದಿಕೆ ಒತ್ತಾಯ

Webdunia
ಭಾನುವಾರ, 13 ಫೆಬ್ರವರಿ 2022 (21:18 IST)
ಮಡಿಕೇರಿಯ ವಾರ್ಡ್ ನಂಬರ್ 20ರ  ಚಾಮುಂಡೇಶ್ವರಿ ನಗರದ ಹಾಲಿನ ಅಂಗಡಿಯ ಸಮೀಪದ ರಸ್ತೆಯ ಬದಿಯಲ್ಲಿ ಕೆಲವು ಹೋಂಸ್ಟೇಗಳ  ಕಸಗಳನ್ನು ಬಿಯರ್ ಬಾಟಲಿ  ಕೆ. ಫ್. ಸಿ ಚಿಕನ್ ನ ಪ್ಯಾಕೆಟ್ ಗಳು ಹಾಗೂ ಇನ್ನಿತರ ತ್ಯಾಜ್ಯಗಳನ್ನು  ತಂದು ಹಾಕುತ್ತಿರುವುದು ಕಂಡು ಬರುತ್ತಿದೆ  ನಗರಸಭೆಯಿಂದ ಇಲ್ಲಿ ಕಸ ಹಾಕಬಾರದು ಎಂದು ಫ್ಲಕ್ಸ್  ಅಳವಡಿಸಿದರು ತಮಗೇನು ಸಂಬಂಧವಿಲ್ಲದಂತೆ  ಅದರ ಬುಡದಲ್ಲೇ ತಂದು ಹಾಕುತ್ತಿರುವುದು ಕಂಡುಬರುತ್ತಿದೆ ಈ ಕಸದ ಬ್ಯಾಗ್ ಗಳನ್ನು ನಾಯಿಗಳು ಎಲ್ಲೆಂದರಲ್ಲಿ ಎಳೆದು ಕೊಂಡು  ರಸ್ತೆಯಲ್ಲೆಲ್ಲ  ಹರಡಿ ಸಾರ್ವಜನಿಕರಿಗೆ ರಸ್ತೆಯಲ್ಲಿ ನಡೆದಾಡಲು  ತುಂಬಾ ತೊಂದರೆಯಾಗುತ್ತಿದೆ ಇದಕ್ಕೂ ಮೊದಲು ಇದೇ ಜಾಗದಲ್ಲಿ  ನಗರಸಭೆಯ ವತಿಯಿಂದ ಒಂದು  ತೊಟ್ಟಿ  ಇರಿಸಲಾಗಿತ್ತು ಈ ತೊಟ್ಟಿ ಯಲ್ಲಿ ಇದ್ದ ಕಸಗಳನ್ನೆಲ್ಲ  ಬೀದಿನಾಯಿಗಳು ರಸ್ತೆಯಲ್ಲಿ ಎಲ್ಲ ಹರಡುತ್ತಿದ್ದವು ಅದರಿಂದ ಹಿತರಕ್ಷಣಾ  ವೇದಿಕೆಯು  ಆಗಿನ ಪೌರಾಯುಕ್ತರು ಹಾಗೂ   ನಗರಸಭಾ  ಅಧ್ಯಕ್ಷರ ಗಮನಕ್ಕೆ ತಂದು  ಆ ತೊಟ್ಟಿಯನ್ನು  ಅಲ್ಲಿಂದ  ತೆರವು ಮಾಡಿಸಿ ವೇದಿಕೆ ವತಿಯಿಂದ ಕಸ  ಹಾಕದಂತೆ ನಾಮಫಲಕವನ್ನು ಅಳವಡಿಸಲಾಗಿತ್ತು  ಈಗ ಕೆಲವು ಹೋಂಸ್ಟೇ ಯವರು  ಇಲ್ಲಿ ಕಸ ಗಳನ್ನು  ತಂದು ಹಾಕುತ್ತಿರುವುದು  ಕಂಡುಬರುತ್ತಿದೆ  ಇಲ್ಲಿ ಕಸ ಹಾಕುವವರ ವಿರುದ್ದ  ನಗರಸಭೆ ಆದಷ್ಟು ಬೇಗ ಕ್ರಮ ತೆಗೆದುಕೊಂಡು ಎಲ್ಲೆಂದರಲ್ಲಿ ಕಸ ಹಾಕುವ ಹೋಂಸ್ಟೇಗಳ  ವಿರುದ್ಧ ಸೂಕ್ತ  ಕ್ರಮ ತೆಗೆದುಕೊಂಡು ಅವರುಗಳಿಗೆ ದಂಡ ವಿಧಿಸಿ ಅವರುಗಳ ಪರವಾನಗಿಯನ್ನು   ರದ್ದು ಮಾಡಬೇಕು ಹಾಗೂ ನಗರಸಭೆ ವತಿಯಿಂದ ಈ ಸ್ಥಳದಲ್ಲಿ  ಒಂದು ಸಿಸಿ ಕ್ಯಾಮರಾವನ್ನು ಅಳವಡಿಸಬೇಕಾಗಿದೆ  ಸ್ಥಳೀಯ ನಾಗರಿಕರು  ಹಾಗೂ  ಹಿತರಕ್ಷಣಾ ವೇದಿಕೆವತಿಯಿಂದ ಮನವಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments