Select Your Language

Notifications

webdunia
webdunia
webdunia
webdunia

ಸುಹಾನಾಗೆ ಧಮ್ಕಿ ಹಾಕಿದವರ ವಿರುದ್ಧ ಕ್ರಮ: ಯು.ಟಿ. ಖಾದರ್

ಸುಹಾನಾಗೆ ಧಮ್ಕಿ ಹಾಕಿದವರ ವಿರುದ್ಧ ಕ್ರಮ: ಯು.ಟಿ. ಖಾದರ್
bengaluru , ಬುಧವಾರ, 8 ಮಾರ್ಚ್ 2017 (13:44 IST)
ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಹಿಂದೂ ದೇವರನ್ನ ಸ್ತುತಿಸುವ ಹಾಡನ್ನ ಹಾಡಿದ್ದ ಯುವತಿ ಸುಹಾನಾ ಸಯ್ಯದ್`ಗೆ ಕೆಲ ಮೂಲಭೂತವಾದಿಗಳು ಸೋಶಿಯಲ್ ಮೀಡಿಯಾದಲ್ಲಿ ಧಮ್ಕಿ ಹಾಕುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಹಾರ ಸಚಿವ ಯು.ಟಿ. ಖಾದರ್, ಸಾಮಾಜಿಕ ಜಾಲತಾಣಗಳಲ್ಲಿ ಯುವತಿಗೆ ಧಮ್ಕಿ ಹಾಕುವವರ ವಿರುದ್ಧ ಸೈಬರ್ ಕ್ರೈಂ ಕಾನೂನಿನಡಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಯುವತಿ ಒಂದೊಮ್ಮೆ ಧರ್ಮದ ವಿರುದ್ಧ ನಡೆದುಕೊಂಡರೆ ಅದರ ಬಗ್ಗೆ ಮಾತನಾಡಲು ಹಿರಿಯರಿದ್ದಾರೆ. ಅದನ್ನ ಬಿಟ್ಟು ಈ ರೀತಿ ತೊಂದರೆ ಕೊಡುವುದು ಸರಿಯಲ್ಲ  ಎಂದು ಖಾದರ್ ಹೇಳಿದ್ದಾರೆ.

ಧರ್ಮದ ಹೆಸರಲ್ಲಿ ಸುಹಾನಾಗೆ ಧಮ್ಕಿ ಹಾಕಿದ್ದು ಖಂಡನೀಯ, ಯಾವುದೇ ಕಾರಣಕ್ಕೂ ಸುಹಾನಾ ಹಾಡುವುದನ್ನ ನಿಲ್ಲಿಸಬಾರದು ಸಂಸದ ಪ್ರತಾಪ್ ಸಿಂಹ ಖಾಸಗಿ ಚಾನಲ್`ಗೆ ಪ್ರತಿಕ್ರಿಯೆ ನೀಡಿದ್ದಾರೆ.

 ಜಾತಿ, ಧರ್ಮದ ಹೆಸರಲ್ಲಿ ಕಲೆಗೆ ಬೇಲಿ ಹಾಕುವುದು ತಪು, ಧಮ್ಕಿ ಹಾಕುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಚಿಂತಕ ಷರಿಯಾರ್ ಖಾನ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಾವು ಕಾಂಗ್ರೆಸ್ ನಿಷ್ಠರು, ನಿಮ್ಮ ನೋಟಿಸ್‌ಗೆ ಧಿಕ್ಕಾರವಿರಲಿ: ಎಚ್.ವಿಶ್ವನಾಥ್