Select Your Language

Notifications

webdunia
webdunia
webdunia
webdunia

ರಾಜ್ಯಸಭಾ ಮಾದರಿಯಲ್ಲಿಯೇ ಲೋಕಸಭೆಯಲ್ಲೂ ವಿಷಯ ಪ್ರಸ್ತಾಪ: ಖರ್ಗೆ

ರಾಜ್ಯಸಭಾ ಮಾದರಿಯಲ್ಲಿಯೇ ಲೋಕಸಭೆಯಲ್ಲೂ ವಿಷಯ ಪ್ರಸ್ತಾಪ: ಖರ್ಗೆ
ನವದೆಹಲಿ , ಬುಧವಾರ, 22 ಜುಲೈ 2015 (12:51 IST)
ಸಂಸತ್ ಮುಂಗಾರು ಅಧಿವೇಶನವು ನಿನ್ನೆಯಿಂದ ಆರಂಭವಾಗಿರುವ ಹಿನ್ನೆಲೆಯಲ್ಲಿ ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರತಿಕ್ರಿಯಿಸಿದ್ದು, ಎನ್‌ಡಿಎ ಸರ್ಕಾರದ ಎಲ್ಲಾ ದುರ್ನಡತೆಗಳನ್ನು ನಿನ್ನೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದಂತೆಯೇ ಲೋಕಸಭೆಯಲ್ಲಿಯೂ ಕೂಡ ಪ್ರಸ್ತಾಪಿಸಲಾಗುವುದು ಎಂದಿದ್ದಾರೆ.   
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಲವಾರು ಹಗರಣಗಳು ನಡೆದಿದ್ದು, ಮಧ್ಯ ಪ್ರದೇಶದ ವ್ಯಾಪಂ ಹಗರಣ, ಐಪಿಎಲ್ ಆರೋಪಿ ಲಲಿತ್ ಮೋದಿ ಅವರು ವಿದೇಶದಲ್ಲಿ ನೆಲೆಸಲು ನೆರವು ನೀಡಿದ ಆರೋಪ ಹಾಗೂ ವಿವಿಧ ರಾಜ್ಯಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ರೈತರ ಆತ್ಮಹತ್ಯೆ ಸೇರಿದಂತೆ ಇನ್ನಿತರೆ ವಿಚಾರಗಳನ್ನು ಪ್ರಸ್ತಾಪಿಸಲಿದ್ದೇವೆ ಎಂದರು. 
 
ಲಲತ್ ಮೋದಿ ಹಗರಣವು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದಾದರೂ ಅದು ಬಗೆಹರಿಸಲಾದ ಪ್ರಕರಣ. ಅಲ್ಲದೆ ಅದರಲ್ಲಿ ಕೇಂದ್ರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕೈವಾಡ ಕೂಡ ಇದೆ. ಈ ಹಿನ್ನೆಲೆಯಲ್ಲಿ ಸುಣ್ಮಾ, ವಸುಂದರರಾಜೆ ಸೇರಿದಂತೆ ಇನ್ನಿತರೆ ಆರೋಪಿತ ನಾಯಕರು ತಮ್ಮ ಘನತೆವೆತ್ತ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಸದನದಲ್ಲಿ ಒತ್ತಾಯಿಸಲಿದ್ದೇವೆ ಎಂದರು. 
 
ಬಳಿಕ, ಕರ್ನಾಟಕಕ್ಕೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಭೇಟಿ ನೀಡಲಿದ್ದಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಹಾವೇರಿಗೆ ಭೇಟಿ ನೀಡಲಿದ್ದಾರೆ ಎಂಬ ವಿಷಯ ನನಗೆ ತಲುಪಿದೆ ಎಂದರು. ಇದೇ ವೇಳೆ, ರಾಜ್ಯ ರಾಜಕಾರಣಕ್ಕೆ ಬರುವ ಸನ್ನಿವೇಶ ಇಲ್ಲ. ಅಲ್ಲದೆ ಆ ಬಗ್ಗೆ ನಾನು ಪ್ರಸ್ತುತ ಪ್ರತಿಕ್ರಿಯಿಸುವುದೂ ಇಲ್ಲ. ಕಾಲ ಬಂದಾಗ ಹೇಳುತ್ತೇನೆ ಎಂದರು. 
 
ಕೊನೆಯಲ್ಲಿ ಈ ಹಿಂದೆ ಇದ್ದ ಯುಪಿಎ ಸರ್ಕಾರ ಬಹಳ ಸೆನ್ಸಿಟೀವ್ ಆಗಿ ಕೆಲಸ ನಿರ್ವಹಿಸುತ್ತಿತ್ತು. ಆದರೂ ಕ್ಯಾತೆ ತೆಗೆದು ಹಲವರಿಂದ ರಾಜೀನಾಮೆ ಪಡೆದಿತ್ತು. ಪ್ರಸ್ತುತ ಎನ್‌ಡಿಎ ಸರ್ಕಾರವೂ ಕೂಡ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ ಎಂದು ಆರೋಪಿಸಿದರು. 

Share this Story:

Follow Webdunia kannada