Select Your Language

Notifications

webdunia
webdunia
webdunia
webdunia

ಸೈನಿಕರ ರಕ್ತದ ಪ್ರತೀಕಾರವಾಗಿ ಮಸಿ ಬಳಿದಿದ್ದೇವೆ: ಶಿವಸೇನೆ ಸಮರ್ಥನೆ

ಸೈನಿಕರ ರಕ್ತದ ಪ್ರತೀಕಾರವಾಗಿ ಮಸಿ ಬಳಿದಿದ್ದೇವೆ: ಶಿವಸೇನೆ ಸಮರ್ಥನೆ
ಮುಂಬೈ, , ಸೋಮವಾರ, 12 ಅಕ್ಟೋಬರ್ 2015 (14:16 IST)
ಎಲ್.ಕೆ.ಅಡ್ವಾಣಿ ಅವರ ಆಪ್ತ ಸುಧೀಂಧ್ರ ಕುಲಕರ್ಣಿ ಅವರಿಗೆ ಶಿವಸೇನೆ ಕಾರ್ಯಕರ್ತರು ಮಸಿ ಬಳಿದ ಪ್ರಕರಣ ಸಂಬಂಧ ಶಿವಸೇನೆ ನಾಯಕ ಸಂಜಯ್ ರಾವುತ್ ಅವರು ಪ್ರತಿಕ್ರಿಯಿಸಿದ್ದು, ಪಾಕ್ ಸೈನಿಕರು ನಮ್ಮ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿ ರಕ್ತ ಹೀರುತ್ತಿರುವ ಪ್ರತೀಕವಾಗಿ ಮಸಿ ಬಳಿದಿದ್ದೇವೆ ಎಂದು ಹೇಳುವ ಮೂಲಕ ಘಟನೆಯನ್ನು ಸರ್ಥಿಸಿಕೊಂಡಿದ್ದಾರೆ.  
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಸಚಿವರೋರ್ವರ ಪುಸ್ತಕ ಬಿಡುಗಡೆ ಸಮಾರಂಭವನ್ನು ಭಾರತದಲ್ಲಿ, ಅದರಲ್ಲಿಯೂ ಮುಂಬೈ ನಗರದಲ್ಲಿ ಆಯೋಜಿಸಿರುವುದು ಖಂಡನೀಯ ಎಂದ ರಾವುತ್, ಗಡಿಯಲ್ಲಿ ಪಾಕ್ ಸೈನಿಕರು ನಮ್ಮ ಸೈನಿಕರ ಮೇಲೆ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಈ ಮೂಲಕ ಕರುಣೆ ಇಲ್ಲದೆ ನಮ್ಮ ಸೈನಿಕರ ರಕ್ತ ಹೀರುತ್ತಿದ್ದಾರೆ. ಆದರೆ ಸೈನಿಕರ ರಕ್ತಕ್ಕೆ ನೀವು ಬೆಲೆ ಕೊಡದೆ ಘಟನೆಯನ್ನು ಬಹುದೊಡ್ಡದೆಂದು ಬಿಂಬಿಸುತ್ತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು. ಜೊತೆಗೆ ಸೈನಿಕರ ರಕ್ತದ ಪ್ರತೀಕವಾಗಿಯೇ ಪಾಕ್ ಪುಸ್ತಕ ಬಿಡುಗಡೆಗೆ ಮುಂದಾಗಿರುವ ಸುಧೀಂದ್ರ ಕುಲಕರ್ಣಿ ಅವರಿಗೆ ಮಸಿ ಬಳಿದಿದ್ದೇವೆ ಎಂದರು. 
 
ಇನ್ನು ಇಂದು ನಗರದ ವೆರ್ಲಿಯಲ್ಲಿನ ನೆಹರೂ ಭವನದಲ್ಲಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ದಿಷ್ ಕಸೂರಿ ಅವರ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಂಕಣಕಾರ, ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಕುಲಕರ್ಣಿ ಅವರೂ ತೆರಳಲಿದ್ದರು. ಇದನ್ನರಿತ ಶಿವಸೇನೆ ಕಾರ್ಯಕರ್ತರು ಅವರ ಮೇಲೆ ಬೆಳಗ್ಗೆ ಮಸಿ ಬಳಿದು ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾವುತ್, ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.  

Share this Story:

Follow Webdunia kannada