Webdunia - Bharat's app for daily news and videos

Install App

ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ: ಬಿಎಸ್‌ವೈ

Webdunia
ಭಾನುವಾರ, 28 ಆಗಸ್ಟ್ 2016 (10:24 IST)
ಕೃಷಿ ಹಾಗೂ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿರುವ ಸಂದರ್ಭದಲ್ಲಿ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವೇ ಇಲ್ಲವೆಂದು ಸುಪ್ರೀಂ ಕೋರ್ಟ್ ಹಾಗೂ ತಮಿಳುನಾಡು ಸರಕಾರಕ್ಕೆ ಮನವರಿಕೆ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
 
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕಾಲೂಕಿನ ಕೆಆರ್‌ಆಸ್ ಜಲಾಶಯಕ್ಕೆ ಭೇಟಿ ನೀಡಿ ನೀರು ಸಂಗ್ರಹದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೀರಿನ ಕೊರತೆ ಇರುವ ಕುರಿತು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳ ತಂಡ ರಚನೆ ಮಾಡಿ ವಾಸ್ತವ ಸ್ಥಿತಿ ಬಗ್ಗೆ ಅಧ್ಯಯನ ನಡಿಸಲಿ ಎಂದರು.
 
ಸಂಕಷ್ಟದಲ್ಲೂ ನೀರಿನ ಅಗತ್ಯವೋ ಅಷ್ಟು ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಈಗಿರುವ ನೀರು ಕುಡಿಯಲು ಸಾಧ್ಯವಾಗುವುದಿಲ್ಲ. ಈ ಕುರಿತು ಕರ್ನಾಟಕ ಪರ ವಕೀಲ ನಾರಿಮನ್ ಅವರು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
 
ಕೆಆರ್‌ಎಸ್‌ನಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ಸಕಷ್ಟ ಪರಿಸ್ಥಿತಿ ಎದುರಾದರೇ ರಾಜ್ಯ ಸರಕಾರದ ಜೊತೆ ನಾವಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pehalgam attack: ಪಹಲ್ಗಾಮ್ ದಾಳಿ ಮಾಡಿದ್ದೀರಿ ಎಂದರೆ ನಾನವನಲ್ಲ ಅಂತಿರೋ ಪಾಕಿಸ್ತಾನ ವಿರುದ್ಧ ಸಿಕ್ಕಿದೆ ಪ್ರಬಲ ಸಾಕ್ಷ್ಯ

Pehalgam attack:ಎನ್ಐಎ ತನಿಖೆಯಲ್ಲಿ ಪಹಲ್ಗಾಮ್ ಉಗ್ರರ ಯೋಜನೆ ಬಗ್ಗೆ ಮತ್ತಷ್ಟು ರೋಚಕ ವಿಚಾರಗಳು ಬಹಿರಂಗ

ಪೆಹಲ್ಗಾಮ್‌ ದಾಳಿ: ಸಾಮೂಹಿಕ ಸಂಕಲ್ಪ ಪ್ರದರ್ಶನಕ್ಕೆ ವಿಶೇಷ ಅಧಿವೇಶನ ಕರೆಯಲು ಕೇಂದ್ರಕ್ಕೆ ಖರ್ಗೆ ಆಗ್ರಹ

ಪೆಹಲ್ಗಾಮ್ ಮಾರಣಹೋಮದ ಬೆನ್ನಲ್ಲೇ 48 ಪ್ರವಾಸಿ ತಾಣಗಳಿಗೆ ಬಾಗಿಲು ಹಾಕಿದ ಸರ್ಕಾರ

ತೊಗಲುಗೊಂಬೆ ಕಲೆಯನ್ನು ವಿದೇಶದಲ್ಲೂ ಪರಿಚಯಿಸಿದ 103 ವರ್ಷದ ಕೊಪ್ಪಳದ ಭೀಮವ್ವಗೆ ಪದ್ಮಶ್ರೀ ಪ್ರದಾನ

ಮುಂದಿನ ಸುದ್ದಿ
Show comments