Select Your Language

Notifications

webdunia
webdunia
webdunia
webdunia

ಸಮವಸ್ತ್ರಗಳ ಖರೀದಿಯಾಗಿರುವುದು ಹೊರ ರಾಜ್ಯಗಳಲ್ಲೇ: ಚಿಂಚನಸೂರ

ಸಮವಸ್ತ್ರಗಳ ಖರೀದಿಯಾಗಿರುವುದು ಹೊರ ರಾಜ್ಯಗಳಲ್ಲೇ: ಚಿಂಚನಸೂರ
ಬೆಂಗಳೂರು , ಗುರುವಾರ, 9 ಏಪ್ರಿಲ್ 2015 (17:03 IST)
ಶಾಲಾ ಮಕ್ಕಳ ಸಮವಸ್ತ್ರಗಳನ್ನು ಹೊರ ರಾಜ್ಯಗಳಿಂದ ಖರೀದಿ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜವಳಿ ಸಚಿವ ಬಾಬುರಾವ್ ಚಿಂಚನಸೂರ ಅವರು ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿರುವ ವಿದ್ಯುತ್ ಮಗ್ಗಗಳಲ್ಲಿ ಕೇವಲ ಸೀರೆಗಳ ಉತ್ಪಾದನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಉಡುಪುಗಳನ್ನು ಹೊರ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ವಿದ್ಯುತ್ ಮಗ್ಗಗಳಲ್ಲಿ ಕೇವಲ ಸೀರೆಗಳ ಉತ್ಪಾದನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಉಡುಪುಗಳಿಗೆ ಕೊರತೆ ಎದುರಾಗಿತ್ತು. ಆದ್ದರಿಂದ ಮಕ್ಕಳಿಗೆ ವಿತರಿಸಬೇಕಿದ್ದ ಸಮವಸ್ತ್ರಗಳನ್ನು ಹೊರ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 
 
ಬಳಿಕ, ಹೊರ ರಾಜ್ಯಗಳಿಂದ ತರಿಸಿಕೊಳ್ಳಲಾಗಿದ್ದರೂ ಕೂಡ ಕಾನೂನು ಬಾಹಿರವಾಗಿ ತರಿಸಿಕೊಂಡಿಲ್ಲ. ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಟೆಂಡರ್ ಮೂಲಕ ಖರೀದಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. 
 
ರಾಜ್ಯದಲ್ಲಿ ಅಗತ್ಯವಾದಷ್ಟು ಬಟ್ಟೆಗಳು ಉತ್ಪಾದನೆಯಾಗುತ್ತಿದ್ದರೂ ಕೂಡ ಶಾಲಾ ಮಕ್ಕಳ ಸಮವಸ್ತ್ರಗಳನ್ನು ಹೊರ ರಾಜ್ಯಗಳಿಂದ ಖರೀದಿ ಮಾಡಲಾಗಿದೆ ಎಂಬ ಆರೋಪ ಅವರ ವಿರುದ್ಧ ಕೇಳಿ ಬಂದಿತ್ತು. ಅಲ್ಲದೆ ರಾಜ್ಯದಲ್ಲಿ ಬಟ್ಟೆ ನೇಯ್ಗೆಗಾಗಿ ಸಾಕಷ್ಟು ಕಾರ್ಖಾನೆಗಳು, ವಿದ್ಯುತ್ ಹಾಗೂ ಕೈ ಮಗ್ಗಗಳಿರುವಾಗ ಸರ್ಕಾರವು ಹೊರ ರಾಜ್ಯಗಳಿಂದ ಬಟ್ಟೆಗಳನ್ನು ಖರೀದಿಸಿದೆ. ಈ ಮೂಲಕ ಇಲ್ಲಿನ ಜವಳಿ ಉದ್ಯಮವನ್ನು ಕುಂಠಿತಗೊಳಿಸಲಾಗುತ್ತಿದೆ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

Share this Story:

Follow Webdunia kannada