ಎಚ್ಚರ...ಎಚ್ಚರ! ಪ್ರೇಮಿಗಳಿಗೆ ರೂಮ್ ಕೊಟ್ಟು ಖಾಸಗಿ ವೀಡಿಯೋ ಚಿತ್ರೀಕರಿಸಿ, ಬ್ಲಾಕ್‍ಮೇಲ್

Webdunia
ಶುಕ್ರವಾರ, 15 ಸೆಪ್ಟಂಬರ್ 2023 (10:06 IST)
ಬೆಂಗಳೂರು : ಪ್ರೇಮಿಗಳ ಖಾಸಗಿ ವೀಡಿಯೋ ಚಿತ್ರೀಕರಿಸಿ ಯುವತಿಗೆ ಬ್ಲಾಕ್ಮೇಲ್ ಮಾಡಿ 1 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನಯನಾ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಎಂಬ ಹೋಟೆಲ್ ಒಂದನ್ನು ನಡೆಸುತ್ತಿದ್ದರು. ಅದರಲ್ಲಿ ಪ್ರೇಮಿಗಳಿಗೆ ರೂಮ್ ಕೊಟ್ಟಿದ್ದರು. ಇದರಲ್ಲಿ ರಹಸ್ಯವಾಗಿ ಕ್ಯಾಮೆರಾ ಇರಿಸಿ ವೀಡಿಯೋ ಚಿತ್ರೀಕರಿಸಿಕೊಂಡಿದ್ದರು. 

ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಆರೋಪಿ ಕಿರಣ್ ಯುವತಿಗೆ ವಾಟ್ಸಾಪ್ ಮಾಡಿದ್ದ. ಬಳಿಕ ಆರೋಪಿಗಳು ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ಕೊಡದೇ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಬಿಡುವುದಾಗಿ ಬೆದರಿಸಿದ್ದರು. ಅಲ್ಲದೇ ಸಂಬಂಧಿಗಳು ಹಾಗೂ ಸ್ನೇಹಿತರಿಗೆ ಕಳಿಸುವ ಬೆದರಿಕೆ ಹಾಕಿದ್ದರು.

ಯುವತಿ ಆರೋಪಿ ನಯಾನಾಳ ಸಂಬಂಧಿ ಎಂದು ತಿಳಿದು ಬಂದಿದೆ. ಯುವತಿ ಎಂಬಿಎ ಪದವಿಧರೆಯಾಗಿದ್ದು ಆಕೆಯ ಸ್ನೇಹಿತನೊಂದಿಗೆ ಆಗಾಗ ಹೋಟೆಲ್ಗೆ ಬರುತ್ತಿದ್ದಳು. ಇದನ್ನೇ ದುರುಪಯೋಗಪಡಿಸಿಕೊಂಡ ಆರೋಪಿಗಳು ಹಣಕ್ಕಾಗಿ ವೀಡೀಯೋ ಚಿತ್ರಿಕರಿಸಿ ಬ್ಲಾಕ್ಮೇಲ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಮೀಕ್ಷೆಯಿಂದಾಗಿ ಮಕ್ಕಳ ಕಲಿಕೆಗೆ ಭಾರೀ ಪೆಟ್ಟು: ವಿಜಯೇಂದ್ರ ಆಕ್ರೋಶ

ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ತಾಯಿ, ಪತಿಯ ಈ ಬೆದರಿಕೆಯೇ ಕಾರಣವಾಯಿತೇ

ಅಶ್ರಫ್ ಕೊಲೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿ ಭರತ್‌ಗೆ ಬಿಗ್ ಶಾಕ್

ಐಷರಾಮಿ ಕಾರಿಗೆ ಬೇಡಿಕೆಯಿಟ್ಟ ಮಗ, ಕಬ್ಬಿಣದ ಸರಳಿನಿಂದ ಹೊಡೆದ ಅಪ್ಪನ ವಿರುದ್ಧ ಬಿತ್ತು ದೊಡ್ಡ ಕೇಸ್

ಬೆಂಗಳೂರಿನಲ್ಲಿ ಟ್ರಾಫಿಕ್ ಇರೋದು ಒಳ್ಳೇದು ಅನ್ನೋದಾ ಸಚಿವ ಪ್ರಿಯಾಂಕ್ ಖರ್ಗೆ

ಮುಂದಿನ ಸುದ್ದಿ
Show comments