Select Your Language

Notifications

webdunia
webdunia
webdunia
webdunia

ವಜ್ರಖಚಿತ ಕೈಗಡಿಯಾರ ಧರಿಸುತ್ತಾರಂತೆ ಸಿಎಂ ಸಿದ್ದರಾಮಯ್ಯ

ವಜ್ರಖಚಿತ ಕೈಗಡಿಯಾರ ಧರಿಸುತ್ತಾರಂತೆ ಸಿಎಂ ಸಿದ್ದರಾಮಯ್ಯ
ಬೀದರ್ , ಮಂಗಳವಾರ, 9 ಫೆಬ್ರವರಿ 2016 (17:29 IST)
ಸಿಎಂ ಸಿದ್ದರಾಮಯ್ಯ ವಾಚ್ ವಿವಾದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಾಜಿ ಸಿಎಂ ಕುಮಾರ ಸ್ವಾಮಿಯವರು ಆರೋಪಿಸಿದಂತೆ ದುಬಾರಿ ಬೆಲೆಯ ವಾಚ್‌ನ್ನು ನಾನು ಕಟ್ಟುತ್ತಿಲ್ಲ ಎಂದು ಸಿದ್ದರಾಮಯ್ಯ ವಾದಿಸಿದ್ದರು. ಆದರೆ ಅವರು ಕೈಯ್ಯಿಗೆ ಕಟ್ಟುವ ವಾಚ್ ವಜ್ರಖಚಿತವಾಗಿದ್ದು ಅದು 50 ರಿಂದ 70 ಲಕ್ಷ ಬೆಲೆ ಮೌಲ್ಯವುಳ್ಳದ್ದು ಎಂಬುದು ಈಗ ಖಚಿತವಾಗಿದೆ. ಇದು ದುಬಾರಿ ವಾಚ್ ತಯಾರಿಸುವ ಹ್ಯೂಬ್ಲೋಟ್ ಕಂಪನಿ ವಾಚ್ ಎಂಬುದು ಸಾಕ್ಷಿ ಸಮೇತ ಸಾಬೀತಾಗಿದೆ. 

ಅವರು ಧರಿಸುವ ವಾಚ್ ಕಂಪನಿ ಮಾಲೀಕರಿಂದ ಬೆಲೆಯನ್ನು ಖಚಿತ ಪಡಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಕುಮಾರಸ್ವಾಮಿಯವರು ಹೇಳಿದ್ದಾರೆ.
 
ಜತೆಗೆ ಅವರು ಧರಿಸುವ ಕನ್ನಡಕದ ಬೆಲೆ 2 ರಿಂದ 3 ಲಕ್ಷ. ತಾವು ಲೋಹಿಯಾ ಸಿದ್ಧಾಂತವನ್ನು ನಂಬಿದವನೆಂದು ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಐಶಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಬಾಯಲ್ಲಿ ಮಾತ್ರ ಅವರು ಹೋರಾಟಗಾರರು. ಹಿಂದಿನ ಲೋಹಿಯಾವಾದಿ ಸಿದ್ದರಾಮಯ್ಯ ಅಲ್ಲ. ಅವರು ಕೇವಲ ಕಾಂಗ್ರೆಸ್ ಮನೋಭಾವದ ಸಿಎಂ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. 
 
ಕುಮಾರಸ್ವಾಮಿಯವರ ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ 'ಒಬ್ಬ ಸುಳ್ಳುಗಾರ', ಅವರನ್ನು ನಂಬಬೇಡಿ. ನನ್ನ ವಾಚ್ ಮತ್ತು ಕನ್ನಡಕದ ವಿಷಯ ಬಿಟ್ಟರೆ ಅವರಿಗೆ ಮತ್ತೇನೂ ಗೋಚರವಾಗುತ್ತಿಲ್ಲ ಎಂದು ಹೇಳಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಧರಿಸುವ ವಾಚ್ ಮತ್ತು ಕನ್ನಡಕ ವಿಚಾರ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನಡುವೆ ಕಳೆದೊಂದು ವಾರದಿಂದ ವಾಕ್ಸಮರ ನಡೆಯುತ್ತಿತ್ತು. ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೂ.1.5 ಲಕ್ಷದ ಕನ್ನಡಕ ಹಾಗೂ ರೂ.50 ಲಕ್ಷದ ವಾಚ್ ಅನ್ನು ಹಾಕಿಕೊಳ್ಳುತ್ತಾರೆ. ಇಂತಹ ವ್ಯಕ್ತಿಯ ಸಮಾಜವಾದಿ ವ್ಯಕ್ತಿ ಎಂದು ಹೇಗೆ ಕರೆದುಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಹಾಕಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ಸಿದ್ದರಾಮಯ್ಯ ಅವರು, ನನ್ನ ಕನ್ನಡಕವನ್ನು ರು. 50,000 ಹಾಗೂ ವಾಚ್ ಅನ್ನು ರು.10 ಲಕ್ಷಕ್ಕೆ ಕುಮಾರಸ್ವಾಮಿ ಅವರಿಗೆ ಮಾರಾಟ ಮಾಡುತ್ತೇನೆಂದು ತಿರುಗೇಟು ನೀಡಿದ್ದರು.
 
ಅದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ ನನಗೆ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿಸುವ ಅಭ್ಯಾಸವಿಲ್ಲ ಎಂದು ತಿರುಗೇಟು ನೀಡಿದ್ದರು.
 
ಪ್ರತಿಯಾಗಿ ಸಿದ್ದರಾಮಯ್ಯನವರು ಕುಮಾರಸ್ವಾಮಿ ಅವರು ತಮ್ಮ ಮಗನಿಗೆ 5 ಕೋಟಿ ರೂಪಾಯಿ ಕಾರ್ ಕೊಡಿಸಿದ್ದಾರೆ. ಆದರೆ ನನ್ನ ಬಗ್ಗೆ ಆರೋಪ ಮಾಡುತ್ತಾರೆ . ಸಾರ್ವಜನಿಕರ ಜೀವನದಲ್ಲಿರುವವರು ಈ ರೀತಿಯಾಗಿ ಮಾತನಾಡಬಾರದು. ತಮ್ಮ ಮಗನಿಗೆ 5 ಕೋಟಿ ಕಾರು ಕೊಡಿಸಿದವರಿಗೆ ನನ್ನ ಆಸ್ತಿ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದ್ದರು.

Share this Story:

Follow Webdunia kannada