Select Your Language

Notifications

webdunia
webdunia
webdunia
webdunia

ಮಳೆಯಿಂದ ಮನೆ ಗೋಡೆ ಕುಸಿದು ತಾಯಿ, ಮಗಳ ದಾರುಣ ಸಾವು

ಮಳೆಯಿಂದ ಮನೆ ಗೋಡೆ ಕುಸಿದು ತಾಯಿ, ಮಗಳ ದಾರುಣ ಸಾವು
ಬಳ್ಳಾರಿ , ಗುರುವಾರ, 18 ಸೆಪ್ಟಂಬರ್ 2014 (12:53 IST)
ಭಾರೀ ಮಳೆಗೆ ಮನೆ ಗೋಡೆ ಕುಸಿದು ತಾಯಿ, ಮಗಳು ಸಾವನ್ನಪ್ಪಿದ ದಾರುಣ ಘಟನೆ ಬಳ್ಳಾರಿಯ ಕುರುಗೋಡುನಲ್ಲಿ ಸಂಭವಿಸಿದೆ. 55 ವರ್ಷದ ಬಿ.ಬಿ. ಸುಲ್ತಾನ್ ಮತ್ತು 19 ವರ್ಷದ ನಿಲೋಫರ್ ಮೃತಪಟ್ಟವರು.

ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಮನೆಯ ಗೋಡೆ ಸಂಪೂರ್ಣ ತೇವವಾಗಿ ಕುಸಿದುಬಿದ್ದಿದೆ. ಸ್ಥಳಕ್ಕೆ ಕುರುಗೋಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಕಳೆದ ೆರಡು ದಿನಗಳಿಂದ ಭಾರೀ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. 

Share this Story:

Follow Webdunia kannada