Webdunia - Bharat's app for daily news and videos

Install App

ವಿಕ್ಟೋರಿಯಾದಲ್ಲಿ ಕೈದಿ ವಿಶ್ವನಾಥ್ ಮರಣೋತ್ತರ ಪರೀಕ್ಷೆ

Webdunia
ಮಂಗಳವಾರ, 18 ಆಗಸ್ಟ್ 2015 (12:27 IST)
ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ ಕೈದಿ ವಿಶ್ವನಾಥ್‌ನ ಮರಣೋತ್ತರ ಪರೀಕ್ಷೆಯು ಇಂದು ನಗರದ ಕೆ.ಆರ್.ಮಾರುಕಟ್ಟೆಯ ಬಳಿ ಇರುವ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ವೈದ್ಯರು ನ್ಯಾಯಾಧೀಶರ ಸಮ್ಮುಖದಲ್ಲಿ ಪರೀಕ್ಷೆ ನಡೆಸುತ್ತಿದ್ದಾರೆ. ಪರೀಕ್ಷೆಯನ್ನು ಬೆಳಗ್ಗೆ 10.30ಕ್ಕೆ ಆರಂಭಿಸಲಾಗಿದೆ.
 
ಇನ್ನು ಪ್ರಕರಣ ಸಂಬಂಧ ಮೃತ ಕೈದಿಯ ಪೋಷಕರು ಪ್ರತಿಕ್ರಿಯಿಸಿದ್ದು, ವಿಶ್ವನಾಥ್ ಜೈಲಿಗೆ ತೆರಳುವ ಮುನ್ನ ಚೆನ್ನಾಗಿಯೇ ಇದ್ದ. ಆದರೆ ಪ್ರಸ್ತುತ ಆತ ಮಾದಕ ವ್ಯಸನಿ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ನಮಗೆ ಅರಿವಿಲ್ಲ. ಅಲ್ಲದೆ ಪ್ರಸ್ತುತ ಮಗನೇ ಕೈತಪ್ಪಿ ಹೋಗಿರುವ ಕಾರಣ ನಾವು ಯಾವುದೇ ಕಾನೂನು ಹೋರಾಟಕ್ಕೂ ಮುಂದಾಗುವುದಿಲ್ಲ ಎಂದಿದ್ದಾರೆ. 
 
ನಿಮಾನ್ಸ್ ಆಸ್ಪತ್ರೆಯ ಆವರಣದಲ್ಲಿ ಇತರರೆಡೆಗೆ ಮನಬಂದಂತೆ ಗುಂಡು ಹಾರಿಸುತ್ತಿದ್ದ ವಿಶ್ವನಾಥನನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದ ಪೊಲೀಸರು, ಪ್ರತಿ ದಾಳಿ ನಡೆಸಿ ಹತ್ಯೆಗೈದಿದ್ದರು. ಈ ಹಿನ್ನೆಲೆಯಲ್ಲಿ ಮೃತ ದೇಹದ ಪರೀಕ್ಷೆ ನಡೆಸಲಾಗುತ್ತಿದ್ದು, ವಿಶ್ವನಾಥ್ ಇತ್ತೀಚೆಗೆ ಮಾದಕ ವ್ಯಸನಿಯಾಗಿದ್ದ ಎಂದು ಹೇಳಲಾಗುತ್ತಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ