ವಿರಾಟ್ ಕೊಹ್ಲಿ ಫಾರ್ಮ್ ಹೌಸ್ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ..???

Webdunia
ಶುಕ್ರವಾರ, 2 ಸೆಪ್ಟಂಬರ್ 2022 (14:34 IST)
ವಿಕಾಸ್ ಕೊಹ್ಲಿ ಅವರು 19 ಕೋಟಿ 24 ಲಕ್ಷ 50 ಸಾವಿರಕ್ಕೆ ಡೀಲ್ ಪಡೆದು ಮಂಗಳವಾರ 1 ಕೋಟಿ 15 ಲಕ್ಷ 45 ಸಾವಿರ ಸ್ಟ್ಯಾಂಪ್ ಡ್ಯೂಟಿ ಪಾವತಿಸಿ ಭೂಮಿಯನ್ನು ವಿರಾಟ್ ಕೊಹ್ಲಿ ಹೆಸರಿಗೆ ಮಾಡಿಸಿದ್ದಾರೆ.
ಗಣೇಶ ಚತುರ್ಥಿಯ ಒಂದು ದಿನ ಮೊದಲು ಅಂದರೆ ಆಗಸ್ಟ್ 30 ರಂದು (ಮಂಗಳವಾರ), ವಿರಾಟ್ ಕೊಹ್ಲಿ ಪರವಾಗಿ, ಅವರ ಸಹೋದರ ವಿಕಾಸ್ ಕೊಹ್ಲಿ ಮುಂಬೈ ಪಕ್ಕದ ಆಲಿಬಾಗ್ (Alibaug area adjacent to Mumbai) ಪ್ರದೇಶದಲ್ಲಿ 8 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಅಲಿಬಾಗ್‌ನ ಜಿರಾದ್ ಎಂಬ ಪ್ರದೇಶದಲ್ಲಿ ಈ ಭೂಮಿಯನ್ನು ತೆಗೆದುಕೊಳ್ಳಲಾಗಿದ್ದು, ಇಲ್ಲಿ ವಿರಾಟ್ ಕೊಹ್ಲಿ ಐಷಾರಾಮಿ ಫಾರ್ಮ್ ಹೌಸ್ ಸಿದ್ಧಪಡಿಸಲಿದ್ದಾರೆ. ವಿರಾಟ್ ಕೊಹ್ಲಿಗಿಂತ ಮೊದಲು ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ಅಜಿತ್ ಅಗರ್ಕರ್, ರೋಹಿತ್ ಶರ್ಮಾ ಕೂಡ ಆಲಿಬಾಗ್‌ನಲ್ಲಿ ಭೂಮಿ ಖರೀದಿಸಿದ್ದಾರೆ.
 
ಆಲಿಬಾಗ್ ಮುಂಬೈಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು ಇಲ್ಲಿ ಪ್ರಕೃತಿ ಸೌಂದರ್ಯ ಅದ್ಭುತವಾಗಿದೆ. ಅನೇಕ ಸಿನಿಮಾ ತಾರೆಯರು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಇಲ್ಲಿ ಭೂಮಿ ಹೊಂದಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಕೂಡ ತಮ್ಮ ಫಾರ್ಮ್ ಹೌಸ್‌ಗಾಗಿ ಈ ಸ್ಥಳವನ್ನು ತುಂಬಾ ಇಷ್ಟಪಟ್ಟು ಖರೀದಿ ಮಾಡಿದ್ದಾರೆ ಎಂದಯ ವರದಿಯಾಗಿದೆ.
 
ವಿರಾಟ್ ಕೊಹ್ಲಿ ಸದ್ಯ ದುಬೈನಲ್ಲಿ ಏಷ್ಯಾಕಪ್ ಆಡುತ್ತಿದ್ದಾರೆ. ಆರು ತಿಂಗಳ ಹಿಂದೆ ಈ ಜಮೀನು ನೋಡಿದ್ದ ವಿರುಷ್ಕಾ ಜೋಡಿ ಈಗ ಆ ಜಮೀನು ಖರೀದಿಸಲು ಮುಂದಾಗಿದ್ದಾರೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಪವರ್ ಆಫ್ ಅಟಾರ್ನಿ ಪಡೆದು ಅವರ ಸಹೋದರ ವಿಕಾಸ್ ಕೊಹ್ಲಿ ಅವರು 19 ಕೋಟಿ 24 ಲಕ್ಷ 50 ಸಾವಿರಕ್ಕೆ ಡೀಲ್ ಪಡೆದು ಮಂಗಳವಾರ 1 ಕೋಟಿ 15 ಲಕ್ಷ 45 ಸಾವಿರ ಸ್ಟ್ಯಾಂಪ್ ಡ್ಯೂಟಿ ಪಾವತಿಸಿ ಭೂಮಿಯನ್ನು ವಿರಾಟ್ ಕೊಹ್ಲಿ ಹೆಸರಿಗೆ ಮಾಡಿಸಿದ್ದಾರೆ. ಈ ಸಂಪೂರ್ಣ ಒಪ್ಪಂದವನ್ನು ಸಮೀರ ಹ್ಯಾಬಿಟಾಟ್ಸ್ ಎಂಬ ರಿಯಲ್ ಎಸ್ಟೇಟ್ ಕಂಪನಿಯ ಮೂಲಕ ಪೂರ್ಣಗೊಳಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್‌ಎಸ್‌ಎಸ್‌ ಸಂವಿಧಾನಕ್ಕಿಂತ, ಕಾನೂನಿಗಿಂತ ದೊಡ್ಡರವಲ್ಲ: ಮತ್ತೇ ಕುಟುಕಿದ ಪ್ರಿಯಾಂಕ್ ಖರ್ಗೆ

ತೇಜಸ್ವಿ ಸಿಎಂ ಆಗಲು, ರಾಹುಲ್‌ ಪ್ರಧಾನಿಯಾಗಲು ಮತದಾರರಿಗೆ ವಿಶೇಷ ಮನವಿಯಿಟ್ಟ ಡಿಕೆ ಶಿವಕುಮಾರ್

ಚಿಕನ್ ಫ್ರೈಗಾಗಿ ಯುದ್ಧಭೂಮಿಯಂತಾದ ಮದುವೆ ಮಂಟಪ, ಅಂಥಾದೇನಾಯಿತು ಗೊತ್ತಾ

ಮೋದಿ, ನಿತೇಶ್ ಜೋಡಿ ಬಿಹಾರವನ್ನು ಜಂಗಲ್ ರಾಜ್‌ನಿಂದ ಮುಕ್ತಗೊಳಿಸಿದರು: ಅಮಿತ್ ಶಾ

ಮುಂದಿನ ಸುದ್ದಿ
Show comments