Daily Horoscope
✕

ಸಂಚಾರಿ ವಿಜಯ್ ಅಫಘಾತದ ಕುರಿತು ಹೇಳಿಕೆ

Webdunia
ಶುಕ್ರವಾರ, 2 ಜುಲೈ 2021 (19:13 IST)
ಬೆಂಗಳೂರು: ಕಳೆದ ತಿಂಗಳು ನಟ ಸಂಚಾರಿ ವಿಜಯ್‌ರನ್ನು ಬಲಿ ತೆಗೆದುಕೊಂಡ ಅಪಘಾತದ ಕುರಿತು ಬೈಕ್ ಮುಂಬದಿ ಸವಾರ ವಿಜಯ್ ಸ್ನೇಹಿತ ನವೀನ್ ಶುಕ್ರವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
 
ಅಸ್ಪತ್ರೆಯಿಂದ ಡಿಸ್ಟಾರ್ಜ್ ಆದ ಬಳಿಕ ಜಯನಗರ ಪೊಲೀಸ್ ಠಾಣೆಗೆ ಆಗಮಿಸಿ ಹೇಳಿಕೆ ನೀಡಿರುವ ನವೀನ್, ಅಪಘಾತದ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ. ಜಯನಗರ ಟ್ರಾಫಿಕ್ ಪೊಲೀಸರು ಹೇಳಿಕೆ ದಾಖಲಿಸಿಕೊಂಡು ಠಾಣಾ ಜಾಮೀನಿನ ಮೇಲೆ ನವೀನ್ ಬಿಡುಗಡೆ ಮಾಡಿದ್ದು, ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
 
ಅಫಘಾತ ನೆಡೆದ ಜೂನ್ 12 ರ ರಾತ್ರಿ, ಸಂಚಾರಿ ವಿಜಯ್ ಮತ್ತು ಸ್ನೇಹಿತರ ಮನೆಯಲ್ಲಿ ಸೇರಿದ್ದರಂತೆ. ಕೋವಿಡ್ ಕಿಟ್ ಮತ್ತು ಇತರ ಆಹಾರ, ಸಾಮಗ್ರಿಗಳ ಸಹಾಯ ಬಗ್ಗೆ  ವಿಜಯ್ ಮತ್ತು ಸ್ನೇಹಿತರಿಂದ ಚರ್ಚೆ ನೆಡೆದಿತ್ತಂತೆ. ಫುಡ್ ಕಿಟ್, ಔಷಧ ಸೇರಿ  ಸಹಾಯಹಸ್ತ  ಚಾಚಲು ನಿರ್ಧಾರ ಮಾಡಿದ್ದೆವು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.  
 
ಚರ್ಚೆಮಾಡುತ್ತಿದ್ದಾಗ  ಮನೆಯಿಂದ ಪತ್ನಿಯ ಫೋನ್ ಬಂತು. ಪತ್ನಿಗೆ ಮಾತ್ರೆ ತರಲು ಹೊರಟೆ, ದ್ವಿಚಕ್ರ ವಾಹನದಲ್ಲಿ  ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಹೊರಟೆವು. ಈ ವೇಳೆ ತಾನೂ ಬರುವುದಾಗಿ ವಿಜಯ್ ಹೇಳಿದ ಮಾತ್ರೆಗಳನ್ನ ತಗೊಂಡು ವಾಪಸ್ ಬರಬೇಕಾದರೆ  ಬೈಕ್ ಅಪಘಾತ ಸಂಭವಿಸಿತು. ಸ್ಕಿಡ್ ಆದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಯಿತು. ಸ್ಕಿಡ್ ಆಗಿದ್ದರಿಂದ ಬೈಕ್ ಬಿದ್ದದ್ದು ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏನಿದು ಸ್ಟಾರ್ಲಿಂಕ್, ಎಲಾನ್ ಮಸ್ಕ್ ಸ್ಟಾರ್ಲಿಂಕ್ ಭಾರತದ ಭದ್ರತೆ ಎಷ್ಟು ಅಪಾಯಕಾರಿ, ಗಮನಿಸಿ

ವಿಮಾನದಲ್ಲಿ ಅಭಿಜಿತ್ ದಿಪ್ಕೆ ವಶಕ್ಕೆ ಪಡೆಯುವಾಗ ದೇಶದಿಂದ ಹೊರಗೆ ಹಾಕಿ ಎಂದು ಕೂಗಿದ ಸಹಪ್ರಯಾಣಿಕರು: Video

ದಲಿತರ ಸಮಸ್ಯೆ ಕಡೆ ರಾಜ್ಯ ಗೃಹ ಸಚಿವರು ಗಮನ ಹರಿಸಲಿ: ಛಲವಾದಿ ನಾರಾಯಣಸ್ವಾಮಿ

ಅತಿಯಾದ ಆಲೋಚನೆಯಿಂದ ಮುಕ್ತಿ ಪಡೆಯುವುದು ಹೇಗೆ: ಗುರು ಶ್ರೀ ಶ್ರೀ ರವಿ ಶಂಕರ್ ನೀಡಿದ ಸರಳ ಸೂತ್ರಗಳು

ನಮಗ್ಯಾಕೆ ತೊಂದರೆ ಕೊಡಬೇಕು..: ವಿಮಾನದಲ್ಲಿ ಅಭಿಜಿತ್ ದೀಪ್ಕೆ ವರ್ತನೆಗೆ ಬೇಸತ್ತ ಸಹಯಾತ್ರಿಕರ ಆಕ್ರೋಶ Video

ಮುಂದಿನ ಸುದ್ದಿ
Show comments