Select Your Language

Notifications

webdunia
webdunia
webdunia
webdunia

ವಿಧಾನ ಪರಿಷತ್ ಅಧಿವೇಶನ: ಭೂಕಂಪದಲ್ಲಿ ಮೃತರಿಗೆ ಸಂತಾಪ

ವಿಧಾನ ಪರಿಷತ್ ಅಧಿವೇಶನ: ಭೂಕಂಪದಲ್ಲಿ ಮೃತರಿಗೆ ಸಂತಾಪ
ಬೆಂಗಳೂರು , ಸೋಮವಾರ, 27 ಏಪ್ರಿಲ್ 2015 (12:55 IST)
ಬಿಬಿಎಂಪಿ ವಿಭಜನೆ ಹಿನ್ನೆಲೆಯಲ್ಲಿ ಕರೆದಿರುವ ವಿಧಾನ ಪರಿಷತ್‌ನ ವಿಶೇಷ ಅಧಿವೇಶನವು ಇಂದು ಮತ್ತೆ ಆರಂಭವಾಗಿದ್ದು, ಸದನದಲ್ಲಿ ನೇಪಾಳ ಭೂಕಂಪದಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು. 
 
ಸಭಾಪತಿ ಡಿ.ಹೆಚ್.ಶಂಕರ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಕಲಾಪದಲ್ಲಿ ಎಲ್ಲಾ ಸದಸ್ಯರೂ ಕೂಡ ಎದ್ದುನಿಂತು ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲದೆ ಎಲ್ಲಾ ಸದಸ್ಯರೂ ಕೂಡ ಸಮಾಜ ಸೇವಾ ಕಾರ್ಯಕ್ಕೆ ನಿರ್ಧಾರ ಕೈಗೊಂಡು ತಮ್ಮ ಒಂದು ತಿಂಗಳ ವೇತನವನ್ನು ಭೂಕಂಪದಿಂದ ನಲುಗಿದವರ ಪರಿಹಾರ ನಿಧಿಗೆ ನೀಡಲು ತೀರ್ಮಾನ ಕೈಗೊಳ್ಳಲಾಯಿತು. ಈ ನಿರ್ಧಾರವನ್ನು ಸಭಾಪತಿ ಶಂಕರಮೂರ್ತಿ ಅವರು ಮಂಡಿಸಿದರು. 
 
ಇನ್ನು ಬಿಬಿಎಂ ವಿಭಜನೆಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ನೀಡಿದ್ದು, ಚುನಾವಣೆ ವಿಷಯಕ್ಕೆ ಸಂಬಂಧಿಸಿದಂತೆ 6 ತಿಂಗಳ ಕಾಲ ಅವಕಾಶ ನೀಡಿತ್ತು. ಈ ಆದೇಶದಿಂದ ರಿಲ್ಯಾಕ್ಸ್ ಆಗಿರುವ ಸರ್ಕಾರ, ಇಂದು ನಡೆಯುತ್ತಿರುವ ಅಧಿವೇಶನದಲ್ಲಿ ಬಿಬಿಎಂಪಿ ವಿಭಜನಾ ವಿಧೇಯಕ ಮತ್ತು ಕರ್ನಾಟಕ ನಗರಪಾಲಿಕೆಗಳ ತಿದ್ದುಪಡಿ ವಿಧೇಯಕ-2015ನ್ನು ಮಂಡಿಸಲು ಸರ್ಕಾರ ಮುಂದಾಗಿದೆ. ಆದರೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ವಿಧೇಯಕಗಳ ಅನುಮೋದನೆಯನ್ನು ನಿರಾಕರಿಸಲು ಸಿದ್ಧವಾಗಿವೆ. ಇದರಿಂದ ಸರ್ಕಾರ ವಿಭಜನಾ ವಿಷಯದಲ್ಲಿ ಸಂಕಷ್ಟ ಎದುರಿಸುವ ಲಕ್ಷಣಗಳು ಗೋಚರಿಸುತ್ತಿವೆ.  

Share this Story:

Follow Webdunia kannada