Select Your Language

Notifications

webdunia
webdunia
webdunia
webdunia

ವಿಧಾನಮಂಡಲ ಅಧಿವೇಶನ ಕೇವಲ ಐದು ದಿನಕ್ಕೆ ಸೀಮಿತವಲ್ಲ: ಟಿ.ಬಿ.ಜಯಚಂದ್ರ

ವಿಧಾನಮಂಡಲ ಅಧಿವೇಶನ ಕೇವಲ ಐದು ದಿನಕ್ಕೆ ಸೀಮಿತವಲ್ಲ: ಟಿ.ಬಿ.ಜಯಚಂದ್ರ
ಬೆಂಗಳೂರು , ಸೋಮವಾರ, 6 ಫೆಬ್ರವರಿ 2017 (10:50 IST)
ವಿಧಾನಸಭೆಯ ವಿಧಾನಮಂಡಲದ ಅಧಿವೇಶನ ಕೇವಲ ಐದು ದಿನಕ್ಕೆ ಸೀಮಿತವಲ್ಲ. ಅವಧಿ ವಿಸ್ತರಣೆಗೆ ಕಾಲಾವಕಾಶ ಇದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಮಂಡಲ ಅಧಿವೇಶನದ ಅವಧಿ ವಿಸ್ತರಣೆಗೆ ಅವಕಾಶ ಇದೆ. ಈ ಕುರಿತು ಚರ್ಚಿಸಲು ಇಂದು ಕಲಾಪ ಸಲಹಾ ಸಮಿತಿಯ ಸಭೆ ಕರೆಯಲಾಗಿದೆ ಎಂದು ತಿಳಿಸಿದರು. 

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರವೇ ಹೆಚ್ಚು ದಿನ ಅಧಿವೇಶನ ನಡೆದಿದೆ. ನಾವೇ ರೂಪಿಸಿರುವ ನಿಯಮದಂತೆ ಹೆಚ್ಚು ದಿನ ಅಧಿವೇಶನ ನಡೆಸಿದ್ದೇವೆ. ವರ್ಷದಲ್ಲಿ 60 ದಿನದ ಅಧಿವೇಶನ ನಿಯಮದ ಹತ್ತಿರ ನಾವಿದ್ದೇವೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
 
ಇಂದಿನಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದಲ್ಲಿ ಐಟಿ ದಾಳಿ ಹಾಗೂ ಬರ ನಿರ್ವಹಣೆಯ ಕುರಿತು ಚರ್ಚೆ ಕಾವೇರುವ ಸಾಧ್ಯತ್ಯೆಗಳಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆ ಸೇರಿದ ಪತಿ ನಟರಾಜನ್; ಸಂದಿಗ್ಧತೆಯಲ್ಲಿ ಶಶಿಕಲಾ