Webdunia - Bharat's app for daily news and videos

Install App

ಜಾರ್ಖಂಡ್ ವಿದ್ಯಾರ್ಥಿಗಳ ಬಗ್ಗೆ ಕೇಳುತ್ತಿದ್ದಂತೇ ಎಲ್ಲವನ್ನೂ ಸಂಸತ್ ನಲ್ಲಿ ಚರ್ಚಿಸಕ್ಕಾಗಲ್ಲ ಎಂದು ಹೊರಟೇ ಹೋದ ಮಲ್ಲಿಕಾರ್ಜುನ ಖರ್ಗೆ Video

ಕೃಷ್ಣವೇಣಿ ಕೆ
ಮಂಗಳವಾರ, 11 ಆಗಸ್ಟ್ 2026 (16:21 IST)
ನವದೆಹಲಿ: ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಪ್ರಮುಖ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.
 
ಮಾಧ್ಯಮ ಪ್ರತಿನಿಧಿಗಳು ಖರ್ಗೆ ಅವರ ಬಳಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಹಾಗೂ ಜಾರ್ಖಂಡ್ ವಿದ್ಯಾರ್ಥಿಗಳ ಸಮಸ್ಯೆಯ ಕುರಿತು ಪ್ರಶ್ನಿಸಿದಾಗ, ಅವರು ಈ ವಿಷಯದಿಂದ ತಕ್ಷಣವೇ ದೂರ ಸರಿಯುವ ಯತ್ನ ಮಾಡಿದರು. "ಅದು ಬೇರೆಯದೇ ವಿಚಾರ. ಇಂತಹ ನೂರಾರು ವಿಷಯಗಳಿವೆ; ಒಂದೇ ದಿನದಲ್ಲಿ ಪ್ರತಿಯೊಂದನ್ನೂ ಚರ್ಚಿಸಲು ನಮಗೆ ಸಾಧ್ಯವಿಲ್ಲ," ಎಂದು ಅಸಮಾಧಾನದಿಂದಲೇ ಉತ್ತರಿಸಿದರು.
 
ಇಷ್ಟ ಹೇಳುತ್ತಿದ್ದಂತೆ ಕಾರಿನ ಗ್ಲಾಸ್/ವಿಂಡೋಗಳನ್ನು ಮೇಲಕ್ಕೆ ಏರಿಸಿದ ಅವರು, ಅಲ್ಲಿಂದ ತಕ್ಷಣವೇ ತೆರಳಿದರು. ಬಿಜೆಪಿ ನಡೆಸುತ್ತಿರುವ ಆರೋಪ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ಕಾಂಗ್ರೆಸ್ ಹಗುರವಾಗಿ ಪರಿಗಣಿಸುತ್ತಿದೆ ಎಂದು ಆಡಳಿತಾರೂಢ ಬಿಜೆಪಿ ಈ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ವಿದ್ಯಾರ್ಥಿಗಳ ಸಮಸ್ಯೆಗೆ ಉತ್ತರಿಸದೆ ಖರ್ಗೆ ಅವರು ಜಾರಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸುವ ನಿರೀಕ್ಷೆಯಿದೆ.
 
ಜಾರ್ಖಂಡ್ ನಲ್ಲಿ ಇಂಡಿ ಒಕ್ಕೂಟದ ಸರ್ಕಾರ ಅಧಿಕಾರದಲ್ಲಿದ್ದು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಿನ್ನೆ ಟಿಯರ್ ಗ್ಯಾಸ್, ಲಾಠಿ ಚಾರ್ಜ್ ಮಾಡಲಾಗಿದೆ. ಇದರ ವಿರುದ್ಧ ಬಿಜೆಪಿ ಇಂದು ಸಂಸತ್ ಭವನದ ಮುಂಭಾಗ ಪ್ರತಿಭಟನೆ ನಡೆಸಿದೆ. ದೆಹಲಿಯಲ್ಲಿ ದಾಂಧಲೆ ಮಾಡಿದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದನ್ನು ಮಹಾಪರಾಧ ಎಂದು ಬೊಬ್ಬಿರಿದಿದ್ದ ಕಾಂಗ್ರೆಸ್ ಈಗ ಯಾಕೆ ಮೌನವಾಗಿದೆ ಎಂದು ಬಿಜೆಪಿ ಟೀಕಿಸಿದೆ.
pic.twitter.com/kz6lbem1yS

 

— News Algebra (@NewsAlgebraIND) August 11, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾರ್ಖಂಡ್ ವಿದ್ಯಾರ್ಥಿಗಳ ಬಗ್ಗೆ ಕೇಳುತ್ತಿದ್ದಂತೇ ಎಲ್ಲವನ್ನೂ ಸಂಸತ್ ನಲ್ಲಿ ಚರ್ಚಿಸಕ್ಕಾಗಲ್ಲ ಎಂದು ಹೊರಟೇ ಹೋದ ಮಲ್ಲಿಕಾರ್ಜುನ ಖರ್ಗೆ Video

ಸದನದಲ್ಲಿ ಹಲವು ಜಟಾಪಟಿ ನಡುವೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಅಮಿತ್‌ ಶಾ, ರಾಹುಲ್ ಗಾಂಧಿ, ಎಲ್ಲಿ ಗೊತ್ತಾ, Video

ಕರ್ನಾಟಕ ಬಂದ್ ದಿನ ಬೆಂಗಳೂರಿನ ಶಾಲೆಗಳಿಗೆ ರಜೆಯಿರುತ್ತಾ, ಇಲ್ಲಿದೆ ಉತ್ತರ

ರಾಜ್ಯದಲ್ಲಿ ಗೂಂಡಾಗಿರಿ ಸರಕಾರ- ಆರ್.ಅಶೋಕ್

ಕರ್ನಾಟಕ ಬಂದ್‌ ಕೂಗಿನ ಬೆನ್ನಲ್ಲೇ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಆಘಾತ

ಮುಂದಿನ ಸುದ್ದಿ
Show comments