Daily Horoscope
✕

ಕಂಡಕ್ಟರ್ ಬ್ಯಾಗ್ ನ್ನೇ ಎಗರಿಸಿದ ಮಹಿಳೆ: ದಮ್ಮಯ್ಯ ಎಂದರೂ ಬಿಡದ ಬಿಎಂಟಿಸಿ ಚಾಲಕ Video

ಕೃಷ್ಣವೇಣಿ ಕೆ
ಬುಧವಾರ, 15 ಜುಲೈ 2026 (11:27 IST)
Photo Credit: X
ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಸಾರಿಗೆಯಾದ ಬಿಎಂಟಿಸಿ ಬಸ್‌ಗಳಲ್ಲಿ ಕಳ್ಳರ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗ ಬಸ್ ಸಿಬ್ಬಂದಿಯ ವಸ್ತುಗಳಿಗೂ ಭದ್ರತೆ ಇಲ್ಲದಂತಾಗಿದೆ. ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್ ಅವರ ಹಣ ಹಾಗೂ ಟಿಕೆಟ್‌ಗಳಿದ್ದ ಬ್ಯಾಗ್‌ ಅನ್ನೇ ಚಾಣಾಕ್ಷತನದಿಂದ ಕದಿಯಲು ಯತ್ನಿಸಿದ ಮಹಿಳೆಯೊಬ್ಬಳು ರಂಗೇಹಸ್ತವಾಗಿ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ನಡೆದಿದೆ.
 
ಕಿಕ್ಕಿರಿದು ತುಂಬಿದ್ದ ಬಸ್‌ನಲ್ಲಿ ಚಾಲಾಕಿ ಕೃತ್ಯ: ಬಸ್‌ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದ ಸಮಯವನ್ನು ಬಳಸಿಕೊಂಡ ಈ ಮಹಿಳೆ, ಕಂಡಕ್ಟರ್ ಅವರ ಗಮನ ಬೇರೆಡೆ ಇದ್ದಾಗ ಅತ್ಯಂತ ಚಾಣಾಕ್ಷತನದಿಂದ ಅವರ ಬ್ಯಾಗ್‌ ಎಗರಿಸಿದ್ದಾಳೆ.
 
ಸ್ಥಳದಲ್ಲೇ ರೆಡ್‌ಹ್ಯಾಂಡ್‌ ಆಗಿ ಸೆರೆ: ಕಳ್ಳತನ ನಡೆಸಿ ಬಸ್‌ನಿಂದ ಪರಾರಿಯಾಗಲು ಯತ್ನಿಸುತ್ತಿದ್ದಂತೆಯೇ, ಕಂಡಕ್ಟರ್ ಹಾಗೂ ಬಸ್‌ನಲ್ಲಿದ್ದ ಇತರ ಪ್ರಯಾಣಿಕರ ಜಾಗರೂಕತೆಯಿಂದಾಗಿ ಮಹಿಳೆ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದಾಳೆ. ತಕ್ಷಣವೇ ಆಕೆಯನ್ನು ವಶಕ್ಕೆ ಪಡೆದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಸಾರ್ವಜನಿಕ ಸಾರಿಗೆಯಲ್ಲಿ ಧೈರ್ಯವಾಗಿ ನಡೆಸಲಾಗುತ್ತಿರುವ ಈ ರೀತಿಯ ಕಳ್ಳತನಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳವನ್ನುಂಟು ಮಾಡಿವೆ. ದಿನವಿಡೀ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಬಸ್ ಸಿಬ್ಬಂದಿಯ ಬ್ಯಾಗ್‌ಗಳೇ ಸುರಕ್ಷಿತವಾಗಿಲ್ಲ ಎಂದ ಮೇಲೆ, ಸಾಮಾನ್ಯ ಪ್ರಯಾಣಿಕರ ಪಾಡೇನು ಎಂಬ ಪ್ರಶ್ನೆ ಮೂಡಿದೆ.
pic.twitter.com/17TQbl3PZV

 

— Karnataka Portfolio (@karnatakaportf) July 15, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಎಂಕೆಗೆ ಈಗ ಫುಲ್ ಡಿಮ್ಯಾಂಡ್: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ವಿರೋಧಿಸಲುಸ್ಟಾಲಿನ್ ಮನವೊಲಿಕೆಗೆ ಇಳಿದ ಸೋನಿಯಾ, ರಾಹುಲ್

ಶಿಕ್ಷಣ ಸಾಲ ಪಡೆಯುವುದು ಹೇಗೆ, ಅಗತ್ಯ ದಾಖಲೆಗಳು ಮತ್ತು ಮರುಪಾವತಿ ಅವಧಿಯ ಸಂಪೂರ್ಣ ಮಾಹಿತಿ

ವಿಚ್ಛೇದನವಾದರೆ ನಿಮ್ಮ ಆಸ್ತಿ ನಷ್ಟವಾಗದಂತೆ ಏನು ಮಾಡಬಹುದು

ತಿರುಪ್ಪರಂಕುಂದ್ರಂ ದೀಪ ವಿವಾದ ತೀರ್ಪಿನ ಮೂಲಕ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ನೀಡಿದ ಖಡಕ್ ಸಂದೇಶವೇನು

ವಲಸೆ ಕಾರ್ಮಿಕರ ಮೇಲೆ ಸಿನಿಮಾ ಸ್ಟೈಲ್ ನಲ್ಲಿ ಮಾಲಿಕನ ದರ್ಪ: ವಿಡಿಯೋ ವೈರಲ್ Video

ಮುಂದಿನ ಸುದ್ದಿ
Show comments