Webdunia - Bharat's app for daily news and videos

Install App

ಬಿಎಂಟಿಸಿ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಸರಿಯಾಗೇ ಗೂಸಾ ಕೊಟ್ಟ ಚಾಲಕ video

ಕೃಷ್ಣವೇಣಿ ಕೆ
ಶನಿವಾರ, 25 ಜುಲೈ 2026 (10:23 IST)
Photo Credit: X
ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಕಾಮುಕನಿಗೆ ಯುವತಿಯ ಧೈರ್ಯ ಹಾಗೂ ಬಸ್ ಚಾಲಕನ ತಕ್ಷಣದ ಸಮಯಪ್ರಜ್ಞೆಯಿಂದ ತಕ್ಕ ಶಾಸ್ತಿಯಾಗಿದೆ. ಮೌನವಾಗಿರಲು ನಿರಾಕರಿಸಿ ಗಟ್ಟಿಯಾಗಿ ಧ್ವನಿ ಎತ್ತಿದ ಯುವತಿಯ ಧೈರ್ಯ ಮತ್ತು ಆಕೆಗೆ ಬೆಂಬಲವಾಗಿ ನಿಂತು ಕಾಮುಕನಿಗೆ 'ಫ್ಲೈಯಿಂಗ್ ಕಿಕ್' ನೀಡಿದ ಬಿಎಂಟಿಸಿ ಚಾಲಕ ಪ್ರವೀಣ್ ಅವರ ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಸನ್ನಿವೇಶವು 500D ಮಾರ್ಗದ ಬಿಎಂಟಿಸಿ ಬಸ್‌ನಲ್ಲಿ ಹೆಬ್ಬಾಳದಿಂದ ಮಾನ್ಯತಾ ಟೆಕ್ ಪಾರ್ಕ್  ಕಡೆಗೆ ಚಲಿಸುತ್ತಿದ್ದಾಗ ನಡೆದಿದೆ.

ಯುವತಿಯ ದಿಟ್ಟ ಪ್ರತಿಭಟನೆ: ಬಸ್‌ನಲ್ಲಿದ್ದ ವಿಕೃತಕಾಮಿಯೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಆದರೆ, ಅದಕ್ಕೆ ಹೆದರಿ ಮೌನವಾಗಿರದೆ ಆ ಯುವತಿ ತಕ್ಷಣವೇ ಆತನ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿ ಪ್ರತಿಭಟಿಸಿದ್ದಾಳೆ.

ಚಾಲಕ ಪ್ರವೀಣ್ ಸಮಯಪ್ರಜ್ಞೆ: ಯುವತಿ ಕಿರುಚಾಡಿದ್ದನ್ನು ಗಮನಿಸಿದ ತಕ್ಷಣ ಬಸ್ ಚಾಲಕ ಪ್ರವೀಣ್ ಅವರು ಸುರಕ್ಷಿತವಾಗಿ ಬಸ್ ಬದಿಗೆ ನಿಲ್ಲಿಸಿ, ಕಿರುಕುಳ ನೀಡಿದ ಆರೋಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಸಿಯಲು ಬಂದಾಗ 'ಫ್ಲೈಯಿಂಗ್ ಕಿಕ್': ಚಾಲಕ ಪ್ರವೀಣ್ ಪ್ರಶ್ನಿಸಿದಾಗ, ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ಚಾಲಕನ ಮೇಲೆಯೇ ಉಗುಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಚಾಲಕ ಪ್ರವೀಣ್, ಸಾರ್ವಜನಿಕರ ರಕ್ಷಣೆಗೆ ನಿಂತು ಆರೋಪಿಗೆ 'ಫ್ಲೈಯಿಂಗ್ ಕಿಕ್' ನೀಡಿ ತಕ್ಕ ಪಾಠ ಕಲಿಸಿದ್ದಾರೆ. ಕಾಮುಕನ ಬಟ್ಟೆ ಬಿಚ್ಚಿಸಿ ಎಗರಿ ಹೊಡೆದು ಬುದ್ಧಿ ಕಲಿಸಿದ್ದಾರೆ. ಇತರೆ ಪ್ರಯಾಣಿಕರೂ ಸಾಥ್ ನೀಡಿದ್ದಾರೆ.

pic.twitter.com/lMrmiBwl0f

 

— TOI Bengaluru (@TOIBengaluru) July 25, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಗೇಂದ್ರರನ್ನು ಬೇಕಿದ್ದರೆ ಹಣಕಾಸು ಸಚಿವರನ್ನಾಗಿಯೇ ಮಾಡಲಿ.. ಆದರೆ…: ಸಿಟಿ ರವಿ ಷರತ್ತು

ಇನ್ನೇನು ಹೊರಬರಬೇಕೆನ್ನುವಷ್ಟರಲ್ಲಿ ಕೆಳಗೆ ಚಲಿಸಿದ ಲಿಫ್ಟ್‌, ಹೊರಬರುತ್ತಿದ್ದ ಮಹಿಳೆ ಸಾವು, Video

ಆಕೆ ಮೋಸ ಮಾಡಿದ್ಳು, ಅದಕ್ಕೆ ಕೊಂದು ಹಾಕಿದೆ, ಸ್ಟೇಟಸ್ ಹಾಕಿದ ಆತ ಮಾಡಿದ ಮತ್ತೊಂದು ಹತ್ಯೆ

ರಾಜ್ಯದ ರೈಲು ನಿಲ್ದಾಣಗಳಲ್ಲಿ ಆಹಾರ ಪರಿಶೀಲನೆ ವೇಳೆ ಅವಧಿ ಮೀರಿದ ಹಾಲು, ಮೊಸರು, ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರು ಪತ್ತೆ, Video

ಯುವಕನ ಅತಿವೇಗದ ಕ್ರೇಜ್‌ಗೆ ಪ್ರಾಣನೇ ಹೋಯಿತು, ಭಯಾನಕ ವಿಡಿಯೋ

ಮುಂದಿನ ಸುದ್ದಿ