Daily Horoscope

ಹುಷಾರ್.. ಬಟ್ಟೆ ಅಂಗಡಿಗೆ ಹೋಗಿ ಟ್ರಯಲ್ ನೋಡುವ ಮಹಿಳೆಯರು ತಪ್ಪದೇ ಈ ವಿಡಿಯೋ ನೋಡಬೇಕು Video

ಕೃಷ್ಣವೇಣಿ ಕೆ
ಬುಧವಾರ, 10 ಜೂನ್ 2026 (11:05 IST)
Photo Credit: X
ಜೈಪುರ: ಬಟ್ಟೆ ಅಂಗಡಿಗೆ ಹೋಗಿ ಟ್ರಯಲ್ ರೂಂಗೆ ಹೋಗಿ ಡ್ರೆಸ್ ಸರಿಯಾಗಿದೆಯಾ ಎಂದು ಚೆಕ್ ಮಾಡುವವರು ಈ ವಿಡಿಯೋವನ್ನು ತಪ್ಪದೇ ನೋಡಬೇಕು.

ಬಟ್ಟೆ ಅಂಗಡಿಗಳು, ಮಾಲ್‌ಗಳು ಅಥವಾ ಹೋಟೆಲ್‌ಗಳ ಚೇಂಜಿಂಗ್ ರೂಮ್‌ಗಳನ್ನು ಬಳಸುವಾಗ ಸಣ್ಣ ನಿರ್ಲಕ್ಷ್ಯವೂ ಸಹ ನಮ್ಮ ಗೌರವ ಮತ್ತು ಗೌಪ್ಯತೆಗೆ ಧಕ್ಕೆ ತರಬಹುದು. ಇತ್ತೀಚಿನ ದಿನಗಳಲ್ಲಿ ಹಿಡನ್ ಕ್ಯಾಮೆರಾಗಳ ತಂತ್ರಜ್ಞಾನಗಳು ಅತಿ ಸೂಕ್ಷ್ಮವಾಗಿರುವುದರಿಂದ, ಜಾಗರೂಕರಾಗಿರುವುದು ಅತ್ಯಗತ್ಯ.

ಈ ವಿಡಿಯೋದಲ್ಲಿ ಕಾಣುತ್ತಿರುವ ಘಟನೆ ನಡೆದಿರುವುದು ರಾಜಸ್ತಾನದ ಬಟ್ಟೆ ಅಂಗಡಿಯೊಂದರಲ್ಲಿ. ನೋಡಲು ದೊಡ್ಡ ಬಟ್ಟೆ ಮಳಿಗೆ. ಆದರೆ ಒಳಗೆ ಟ್ರಯಲ್ ರೂಂನಲ್ಲಿ ಕಣ್ಣಿಗೆ ಸುಲಭವಾಗಿ ಕಾಣಿಸದಷ್ಟು ಚಿಕ್ಕ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಇದನ್ನು ಗಮನಿಸಿ ಯಾರೋ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾಗುವ ಪೊಲೀಸರು ಟ್ರಯಲ್ ರೂಂಗೆ ಬಂದು ನೋಡಿದಾಗ ಕ್ಯಾಮರಾ ಕಂಡುಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದು ಒಂದು ಅಂಗಡಿಯ ಪ್ರಕರಣವಲ್ಲ. ಹಲವು ಕಡೆ ಇಂತಹದ್ದೇ ಘಟನೆಗಳಾಗುತ್ತವೆ. ಕೆಲವೊಂದು ನಮ್ಮ ಗಮನಕ್ಕೇ ಬಂದಿರುವುದಿಲ್ಲ. ಹೀಗಾಗಿ ಬಟ್ಟೆ ಅಂಗಡಿಗಳಲ್ಲಿ ಟ್ರಯಲ್ ರೂಂನಲ್ಲಿ ಡ್ರೆಸ್ ಹಾಕುವ ಮೊದಲು ಸುತ್ತಲೂ ಒಮ್ಮೆ ಸೂಕ್ಷ್ಮವಾಗಿ ಗಮನಿಸಿ.


pic.twitter.com/slxPPfs2IT

 

— Sumita Shrivastava (@Sumita327) June 9, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments