Select Your Language

Notifications

webdunia
webdunia
webdunia
webdunia

ನೈಸ್ ರಸ್ತೆ ಪರಿಶೀಲಿಸಿದ ಪರಿಶೀಲನಾ ಸಮಿತಿ

ನೈಸ್ ರಸ್ತೆ ಪರಿಶೀಲಿಸಿದ ಪರಿಶೀಲನಾ ಸಮಿತಿ
ಬೆಂಗಳೂರು , ಸೋಮವಾರ, 2 ಮಾರ್ಚ್ 2015 (16:02 IST)
ರಸ್ತೆ ನಿರ್ಮಾಣದಲ್ಲಿ ತೊಡಗಿರುವ ನೈಸ್ ಸಂಸ್ಥೆಯು ಅಕ್ರಮವಾಗಿ ರಸ್ತೆಗಳನ್ನು ನಿರ್ಮಿಸುತ್ತಿದ್ದು, ಅತಿ ಕಳಪೆಯಿಂದ ಕೂಡಿವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸದನದ ಪರಿಶೀಲನಾ ಸಮಿತಿಯು ಇಂದು ನಗರದ ಹಲವೆಡೆ ತೆರಳಿ ಪರಿಶೀಲಿಸಿತು. 
 
ನೈಸ್ ರಸ್ತೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಆಗಾಗ ಕೇಳಿ ಬರುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ನೈಸ್ ಸಂಸ್ಥೆಯ ಕಾಮಗಾರಿಗಳ ಪರಿಶೀಲನೆಗಾಗಿ ಸರ್ಕಾರ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಅವರ ನೇತೃತ್ವದಲ್ಲಿ ನೇಮಿಸಲಾಗಿದ್ದ ಸದನ ಸಮಿತಿಯು ಇಂದು ನಗರದ ಹಲವೆಡೆ ಭೇಟಿ ನೀಡಿ ನಿರ್ಮಾಣ ರಸ್ತೆಗಳನ್ನು ಪರಿಶೀಲಿಸಿತು. ಇದೇ ವೇಳೆ, ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ಒದಗಿಸಿದ್ದ ರೈತರು ತಮ್ಮ ಸಮಸ್ಯೆಗಳನ್ನು ಪತ್ರದ ಮುಖೇನ ಸಮಿತಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ. 
 
ಈ ಸಂಬಂಧ ಪ್ರತಿಕ್ರಿಯಿಸಿದ ಜಯಚಂದ್ರ ಕಾಮಗಾರಿಯನ್ನು ಪರಿಶೀಲಿಸಿದ್ದು, ರೈಕತರಿಂದ ಅಹವಾಲುಗಳನ್ನೂ ಕೂಡ ಸ್ವೀಕರಿಸಿರುವುದಾಗಿ ತಿಳಿಸಿದರು. ಇನ್ನು ನೈಸ್ ಸಂಸ್ಥೆಯನ್ನು ಶಾಸಕ ಅಶೋಖ್ ಖೇಣಿ ಅವರು ನಡೆಸುತ್ತಿದ್ದಾರೆ. 

Share this Story:

Follow Webdunia kannada