Select Your Language

Notifications

webdunia
webdunia
webdunia
webdunia

ವಯಾಗ್ರ ಓವರ್‌ಡೋಸ್: ಲೈಂಗಿಕ ಕ್ರಿಯೆಯಲ್ಲಿ ಮೃತಪಟ್ಟ ಯುವಕ

ವಯಾಗ್ರ ಓವರ್‌ಡೋಸ್: ಲೈಂಗಿಕ ಕ್ರಿಯೆಯಲ್ಲಿ ಮೃತಪಟ್ಟ ಯುವಕ
ತುಮಕೂರು , ಬುಧವಾರ, 20 ಆಗಸ್ಟ್ 2014 (12:08 IST)
ಲೈಂಗಿಕ ಕ್ರಿಯೆಗೆ ಮುನ್ನ ಕಾಮೋತ್ತೇಜಕ ವಯಾಗ್ರ ಮಾತ್ರೆ ಸೇವಿಸಿ ಚೇತನ್ ಕುಮಾರ್ ಎಂಬ ಯುವಕ ಮೃತಪಟ್ಟ  ದಾರುಣ ಘಟನೆ ತಿಪಟೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಯುವಕ ಚೇತನ ಆಗಸ್ಟ್ 13ರಂದು ಟಾಗೋರ್ ಶಾಲೆಯ ಬಳಿ ತನ್ನ ಪರಿಚಿತನ ರೂಂನಲ್ಲಿ ಯುವತಿಯೊಬ್ಬಳೊಂದಿಗೆ ಲೈಂಗಿಕ ಕ್ರಿಯೆಗೆ ತೊಡಗುತ್ತಾನೆ.

ಲೈಂಗಿಕ ಕ್ರಿಯೆಗೆ ಮುನ್ನ ವಯಾಗ್ರ ಮಾತ್ರೆಯನ್ನು ಹೆಚ್ಚಿನ ಡೋಸ್‌ನಲ್ಲಿ ಸೇವಿಸಿದ್ದ. ಸುಮಾರು 45 ನಿಮಿಷಗಳ ನಂತರವೂ ವಯಾಗ್ರ ಮಾತ್ರೆಯ ಎಫೆಕ್ಟ್ ಕುಂದಿರಲಿಲ್ಲ.   ಆಗ  ಯುವತಿ ತುಂಬಾ ಸುಸ್ತಾಗಿ, ಲೈಂಗಿಕ ಕ್ರಿಯೆಗೆ ಪ್ರತಿರೋಧ ಒಡ್ಡುತ್ತಿದ್ದಾಗ, ಯುವಕ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ. ಯುವಕನ ಮೆದುಳಿಗೆ ವಯಾಗ್ರ ಮಾತ್ರೆಯ ಓವರ್ ಡೋಸ್ ಪರಿಣಾಮ ಬೀರಿತ್ತು. 

ಯುವತಿ ಕೂಡಲೇ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು.  ಮರಣೋತ್ತರ ಪರೀಕ್ಷೆಯಲ್ಲಿ ವಯಾಗ್ರ ಮಾತ್ರೆ ಓವರ್‌ಡೋಸ್ ಆಗಿದ್ದರಿಂದ ಮಿದುಳಿನಲ್ಲಿ ರಕ್ತಸ್ರಾವ ಉಂಟಾಗಿ ಸತ್ತಿದ್ದಾನೆಂದು ವೈದ್ಯರು ಹೇಳಿದ್ದಾರೆ.  

Share this Story:

Follow Webdunia kannada