ಬೆಂಗಳೂರು :ಅಧಿವೇಶನದ ವೇಳೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ವಾಕ್ಸಮರವನ್ನು ತಣಿಸುವ ವೇಳೆ ಯು.ಟಿ ಖಾದರ್ ತುಳುವಿನಲ್ಲಿ ಡೈಲಾಗ್ ಹೊಡೆದರು.ಮಸೂದೆಗಳ ಮಂಡನೆಗಾಗಿ ಸದನ ಅನುವಾದಾಗ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಕೊಬ್ಬರಿ ಬೆಂಬಲ ಬೆಲೆಯ ಬಗ್ಗೆ ಪ್ರಾಸ್ತಾವಿಕ ಚರ್ಚೆಗೆ ಅನುಮತಿ ನೀಡುವಂತೆ ಪಟ್ಟು ಹಿಡಿದರು. ಇದಕ್ಕೆ ವಿರೋಧ ಪಕ್ಷದವರೂ ಸಹ ದನಿಗೂಡಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಲು ಅನುಮತಿ ನೀಡಿದಾಗ, ಕಾಂಗ್ರೆಸ್ ಶಾಸಕ ಶಿವಲಿಂಗೇ ಗೌಡರು, ರೇವಣ್ಣನವರಿಗೆ ಅವಕಾಶ ಕೊಟ್ಟರೆ ನಮಗೂ ಅವಕಾಶ ಕೊಡಬೇಕೆಂದು ತಗಾದೆ ತೆಗೆದರು.ಇದಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಸಿ, ರೇವಣ್ಣನವರು ರೈತರ ಬಗ್ಗೆ ಕಾಳಜಿಯಿಂದ ಮಾತನಾಡುತ್ತಾರೆ. ಆದರೆ ಶಿವಲಿಂಗೇಗೌಡರು ನಾಳೆ ದಿನಪತ್ರಿಕೆಯ ಮೊದಲ ಪುಟದಲ್ಲಿ ಕಾಣಿಸಿಕೊಳ್ಳಲು ಮಾತನಾಡುತ್ತಾರೆ ಎಂದರು.
ಪಟ್ಟು ಸುಮ್ಮನಾಗಿಸಿದ ಯು.ಟಿ. ಖಾದರ್, ದಾದ ಸುದಾರ್ಪುದು ನಿಕ್ಲೆನ್ ,. ಎಲ್ಲರೂ ಸುಮ್ಮನೆ ಕೂತುಕೊಳ್ಳಿ. ಈಗ ಎಲ್ಲಿ ಶಾರ್ಟ್ ಸರ್ಕಿಟ್ ಆಗುತ್ತದೆಯೋ ಹೇಳಲು ಸಾಧ್ಯವಿಲ್ಲ ಎಂದು ಚಟಾಕಿ ಹಾರಿಸಿದರು.