Select Your Language

Notifications

webdunia
webdunia
webdunia
webdunia

ನಕಲಿ ದಾಖಲೆ ಬಳಸಿ ಗುರುತಿನ ಚೀಟಿ: ಕಾಂಗ್ರೆಸ್ ಪ್ರತಿಭಟನೆ

ನಕಲಿ ದಾಖಲೆ ಬಳಸಿ ಗುರುತಿನ ಚೀಟಿ: ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು , ಶನಿವಾರ, 4 ಜುಲೈ 2015 (18:22 IST)
ನಕಲಿ ದಾಖಲೆಗಳನ್ನು ಬಳಸಿ ಚುನಾವಣಾ ಗುರುತಿನ ಚೀಟಿಯನ್ನು ವಿತರಿಸಲಾಗಿದೆ ಎಂದು ಆರೋಪಿಸಿ ನಗರದ ಕೋಣೇನ ಅಗ್ರಹಾರದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಇಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.  
 
ನಕಲಿ ದಾಖಲೆಗಳನ್ನು ಹಾಗೂ ಒಂದೇ ದಾಖಲೆಯನ್ನು ಬಳಸಿ ಹಲವು ಮಂದಿಗೆ ಗುರುತಿನ ಚೀಟಿ ನೀಡಲಾಗಿದೆ ಎಂದು ಮಾಜಿ ಬಿಜೆಪಿ ಕಾರ್ಪೊರೇಟರ್‌ಗಳನ್ನು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೆ ಪ್ರತಿಭಟನೆ ಹಿನ್ನೆಲೆಯಲ್ಲಿ ಕಚೇರಿಗೆ ಪೊಲೀಸರು ಆಗಮಿಸಿದ್ದು, ಕಚೇರಿಯಲ್ಲಿನ ಹಲವು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. 
 
ಇನ್ನು ದಾಖಲೆ ಪರಿಶೀಲನಾ ವೇಳೆ ಅಕ್ರಮ ನಡೆದಿರುವುದು ಕಂಡು ಬಂದಿದ್ದು, ಮಾಜಿ ಬಿಜೆಪಿ ಸದಸ್ಯರಲ್ಲದೆ ಅವರೊಂದಿಗೆ ಅಧಿಕಾರಿಗಳೂ ಕೂಡ ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

Share this Story:

Follow Webdunia kannada