Select Your Language

Notifications

webdunia
webdunia
webdunia
webdunia

ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದ ತೆಲುಗು ನಟಿ ಶ್ವೇತಾ ಬಸು ಪ್ರಸಾದ್

ವೇಶ್ಯಾವಾಟಿಕೆ ದಂಧೆಯಲ್ಲಿ  ಸಿಕ್ಕಿಬಿದ್ದ ತೆಲುಗು ನಟಿ ಶ್ವೇತಾ ಬಸು ಪ್ರಸಾದ್
ಹೈದರಾಬಾದ್ , ಮಂಗಳವಾರ, 2 ಸೆಪ್ಟಂಬರ್ 2014 (20:01 IST)
ಉದಯೋನ್ಮುಖ ನಟಿಯಾಗಿದ್ದ ಶ್ವೇತಾ ಬಸು ಪ್ರಸಾದ್ ಹೈದರಾಬಾದ್‌ನ ಬಂಜಾರಾ ಹಿಲ್ಸ್ ಹೊಟೆಲ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಗ ಭಾನುವಾರ ರಾತ್ರಿ ರೆಂಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಟಾಲಿವುಡ್ ಸಿನಿಮಾದ ಮತ್ತೊಂದು ಮಾಂಸದ ದಂಧೆ ಬಯಲಾಗಿದೆ.
 
 ಕಾರ್ಯಪಡೆ ಪೊಲೀಸರು ನಡೆಸಿದ ದಿಢೀರನೇ ದಾಳಿ ಮಾಡಿದಾಗ ಅವಳು ಬಲೆಗೆ ಬಿದ್ದಿದ್ದಾಳೆ. ನಟಿ ಈ ಪೊಲೀಸರ ಕಸ್ಟಡಿಯಲ್ಲಿದ್ದಾಳೆ. ಪೊಲೀಸರು ಬಾಲು ಎಂಬ ವ್ಯಕ್ತಿಯನ್ನು ಕೂಡ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಳೆದ ವರ್ಷ ಕೂಡ ಶ್ವೇತಾ ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಳು. ಲಭ್ಯವಿರುವ ವಿಡಿಯೋದಲ್ಲಿ ಶ್ವೇತಾ ವ್ಯಕ್ತಿಯೊಬ್ಬನಿಂದ 5 ಲಕ್ಷ ರೂ.ಗೆ ಬೇಡಿಕೆ ಮಂಡಿಸಿದ್ದಳು.

ಪೊಲೀಸರು ನಟಿಯನ್ನು  ಮತ್ತು ಬಾಲುವನ್ನು ಎರಮಂಜಿಲ್ ಕೋರ್ಟ್‌ಗೆ ಹಾಜರುಪಡಿಸಿದಾಗ, ಶ್ವೇತಾಳನ್ನು ಸರ್ಕಾರಿ ಪುನಶ್ಚೇತನ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಕೋರ್ಟ್ ಪೊಲೀಸರಿಗೆ ಸೂಚಿಸಿದೆ. ಬಾಲುವನ್ನು ಚರ್ಲಪಲ್ಲಿ ಜೈಲಿಗೆ ಹಾಕುವಂತೆ ಸೂಚಿಸಿದೆ.ಶ್ವೇತಾ ತೆಲುಗು ಚಿತ್ರ ಕೊತ್ತಾ ಬಂಗಾರು ಲೋಕಂ ಚಿತ್ರದಲ್ಲಿ ನಾಯಕ ವರುಣ್ ಸಂದೇಶ್ ಜೊತೆಗೆ ನಟಿಸಿದ್ದಳು. ಚಿತ್ರೋದ್ಯಮದಲ್ಲಿ ಈ ಚಿತ್ರದಿಂದ ಗುರುತಿಸಿಕೊಂಡಿದ್ದರೂ ನಂತರ ಅದನ್ನು ಉಳಿಸಿಕೊಳ್ಳಲಿಲ್ಲ. 

Share this Story:

Follow Webdunia kannada