ಶೌಚಾಯಲಯಕ್ಕೆ ಹೋಗಿ ಬರ್ತಿನಿ ಇಟ್ಕೊಳಿ ಅಂತ ಹೇಳಿ ಅಪರಿಚಿತ ಮಹಿಳೆ 9 ತಿಂಗಳ ಹಸುಗೂಸನ್ನು ಯುವಕನೊಬ್ಬನ ಕೈಗೆ ಕೊಟ್ಟು ನಾಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಮೈಸೂರು ಮೂಲದ ಯುವಕ ಕೆಲಸದ ಮೇಲೆ ರಾಯಚೂರಿಗೆ ಹೋಗಿದ್ದಾಗ ಈ ಘಟನೆ ನಡೆದಿದ್ದು, ಯುವಕ ಕರೆತಂದ ಮಗುವನ್ನು ಲಷ್ಕರ್ ಠಾಣೆ ಪೊಲೀಸರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನ ಹೆಚ್.ಡಿ.ಕೋಟೆಯ ನಿವಾಸಿ ರಘು ವೈಯಕ್ತಿಕ ಕೆಲಸಕ್ಕಾಗಿ ರಾಯಚೂರಿಗೆ ತೆರಳಿದ್ದರು. ಈ ಮಧ್ಯೆ ಮೈಸೂರಿಗೆ ಹಿಂದಿರುಗಲು ರಘು ರಾಯಚೂರು ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ಬಂದ ಅಪರಿಚಿತ ಮಹಿಳೆ ಮಗುವನ್ನ ಕೊಟ್ಟು ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದಾಳೆ.
ಮಗು ಕೊಟ್ಟ ಮಹಿಳೆ 2-3 ಗಂಟೆಯಾದ್ರೂ ವಾಪಸ್ ಬಾರದ ಹಿನ್ನೆಲೆ. ತನ್ನ ಬಸ್ ಬಂದ ಕಾರಣ ರಘು ಅವರು ಮಗು ಸಮೇತ ಮೈಸೂರಿಗೆ ಆಗಮಿಸಿದ್ದು, ಬಸ್ ನಿಂದ ಇಳಿದ ರಘು ಅವರು ಲಷ್ಕರ್ ಪೊಲೀಸರ ಮೊರೆ ಹೋಗಿದ್ದರು. ನಂತರ ಈ ಬಗ್ಗೆ ರಾಯಚೂರಿನ ಬಸ್ ಸ್ಟ್ಯಾಂಡ್ ವ್ಯಾಪ್ತಿಯ ಪೊಲೀಸರನ್ನ ಲಷ್ಕರ್ ಠಾಣಾ ಪೊಲೀಸರು ಸಂಪರ್ಕಿಸಿದ್ದು, ಮಹಿಳೆ ಮಾಹಿತಿ ಲಭ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಲಷ್ಕರ್ ಠಾಣೆ ಪೊಲೀಸರು ಕಂದನನ್ನ ರಕ್ಷಿಸಿ ಮಾನವೀಯತೆ ಮೆರೆದಿದ್ದು ಇದೀಗ ಮಗು ಬಾಲಮಂದಿರದ ವಶಕ್ಕೆ ನೀಡಿದ್ದಾರೆ.