Select Your Language

Notifications

webdunia
webdunia
webdunia
webdunia

ರೀ ಸ್ವಾಮಿ,ಕರ್ನಾಟಕದ ಬಗ್ಗೆ ಚರ್ಚೆ ಮಾಡ್ತಿದ್ದಾರೆ, ಕೇಳ್ರಿ: ಸಿಎಂಗೆ ಕಾಗೋಡು ಎಚ್ಚರಿಕೆ

ರೀ ಸ್ವಾಮಿ,ಕರ್ನಾಟಕದ ಬಗ್ಗೆ ಚರ್ಚೆ ಮಾಡ್ತಿದ್ದಾರೆ, ಕೇಳ್ರಿ: ಸಿಎಂಗೆ ಕಾಗೋಡು ಎಚ್ಚರಿಕೆ
ಬೆಂಗಳೂರು , ಸೋಮವಾರ, 21 ಜುಲೈ 2014 (17:03 IST)
ಪರಿಷತ್‌ನಲ್ಲಿ ಅತ್ಯಾಚಾರದ ಬಗ್ಗೆ ಗಂಭೀರ ಚರ್ಚೆಯಾಗುತ್ತಿದ್ದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮಾತ್ರ ಈ ಚರ್ಚೆಗೂ ತಮಗೂ ಸಂಬಂಧವೇ ಇಲ್ಲವೆನ್ನುವ ರೀತಿಯಲ್ಲಿ  ಜಯಮಾಲಾ ಜೊತೆ ಮಾತುಕತೆಯಲ್ಲಿ ಬಿಜಿಯಾಗಿದ್ದರು. ಯಾರೇ ಕೂಗಾಡಲೀ, ಯಾರೇ ಹೋರಾಡಲಿ ಎಮ್ಮೆ ನಿನಗೆ ಭಂಗವಿಲ್ಲ ಎನ್ನುವ ರೀತಿಯಲ್ಲಿ  ಉಮಾಶ್ರೀ ವರ್ತನೆಗೆ  ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಉಮಾಶ್ರೀ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಮಹಿಳೆಯರಿಗೆ ಸಾಂತ್ವನ ಹೇಳುವ ಸಹೃದಯತೆಯನ್ನೂ ತೋರಲಿಲ್ಲ ಎಂದು ಉಮಾಶ್ರೀ ವಿರುದ್ಧ ದೂರಲಾಗಿದೆ.

ವಿಧಾನಸಭೆಯಲ್ಲಿ ಅತ್ಯಾಚಾರ ಪ್ರಕರಣವನ್ನು ಆರ್. ಅಶೋಕ್ ಪ್ರಸ್ತಾಪಿಸಿ ಮಾತನಾಡುತ್ತಿದ್ದಾಗ ಸಿಎಂ ಸಿದ್ದರಾಮಯ್ಯ ಅವರು ಕಡತಗಳಿಗೆ ಸಹಿ ಹಾಕುತ್ತಿದ್ದರು. ಆಗ ಚರ್ಚೆಗೂ ತಮಗೂ ಸಂಬಂಧವಿಲ್ಲವೆಂಬಂತೆ ಕುಳಿತಿದ್ದ ಸಿದ್ದರಾಮಯ್ಯನವರಿಗೆ ಸ್ಪೀಕರ್ ಕಾಗೋಡು ತಿಮ್ಮಪ್ಪಾ ಎಚ್ಚರಿಸುತ್ತಾ, ರೀ ಸ್ವಾಮಿ, ಕರ್ನಾಟಕದ ಬಗ್ಗೆ ಚರ್ಚೆ ಮಾಡ್ತಿದ್ದಾರೆ, ಕೇಳ್ರೀ ಎಂದು ಎಚ್ಚರಿಸಿದರು.
 ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿ ರಾತ್ರಿ ಒಂದು ಗಂಟೆವರೆಗೆ ಬಾರ್ ತೆಗೆಯಲು ಅವಕಾಶ ಬೇಡಿ. ಪರಿಸ್ಥಿತಿ ನೋಡಿ ಕ್ರಮ ಕೈಗೊಳ್ಳಿ. ಇನ್ಸ್‌ಪೆಕ್ಟರ್ ಮೇಲೆ ಒತ್ತಡ ಹೇರಿದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಹೇಳಿದರು. ಗೃಹ ಸಚಿವ ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯಿಸುವುದಿಲ್ಲ. ರಾತ್ರಿ ಒಂದು ಗಂಟೆವರೆಗೂ ಬಾರ್‌ಗಳ ಅವಧಿ ವಿಸ್ತರಣೆ ಮಾಡುವುದರಿಂದ ಅಪರಾಧಗಳು ಮತ್ತಷ್ಟು ಹೆಚ್ಚುತ್ತವೆ ಎಂದು ಪ್ರತಿಪಾದಿಸಿದರು. 

ಬೆಳಿಗ್ಗೆ ಅಧಿಕಾರಿಗಳ ವಿರುದ್ಧ ರೋಷವೇಷದಿಂದ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ ಅತ್ಯಾಚಾರದ ಬಗ್ಗೆ ಗಂಭೀರ ಚರ್ಚೆ ನಡೀಬೇಕಾದ್ರೆ ಮತ್ತೆ ನಿದ್ರಾದೇವಿಗೆ ಶರಣಾಗಿದ್ದರು. ಸಿಎಂ ನಿದ್ರೆಯನ್ನು ಕಂಟ್ರೋಲ್ ಮಾಡಲು ಸಾಕಷ್ಟು ಪ್ರಯತ್ನ ಮಾಡಲು ಸಾಧ್ಯವಾಗಿರಲಿಲ್ಲ. 
 

Share this Story:

Follow Webdunia kannada