Select Your Language

Notifications

webdunia
webdunia
webdunia
webdunia

ಸಂಪ್‌ಗೆ ಬಿದ್ದ ಇಬ್ಬರು ಮಕ್ಕಳು ಸಾವು

ಸಂಪ್‌ಗೆ ಬಿದ್ದ ಇಬ್ಬರು ಮಕ್ಕಳು ಸಾವು
ಶಿವಮೊಗ್ಗ , ಗುರುವಾರ, 5 ಮಾರ್ಚ್ 2015 (12:17 IST)
ಆಟವಾಡುತ್ತಿದ್ದ ವೇಳೆ ಮನೆಯ ಮುಂದಿದ್ದ ನೀರು ಸಂಗ್ರಣಾ ತೊಟ್ಟಿ(ಸಂಪ್)ಗೆ ಬಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ನಗರದ ವಿನೋಭಾನಗರ ವ್ಯಾಪ್ತಿಯಲ್ಲಿರುವ ಹಳೆ ಬೊಮ್ಮನಕಟ್ಟೆಯ ಮನೆಯೊಂದರಲ್ಲಿ ನಡೆದಿದೆ. 
 
ಮೃತ ಮಕ್ಕಳನ್ನು ತರಣ್(6) ಹಾಗೂ ದಿವ್ಯಾ(4) ಎನ್ನಾಗಿದ್ದು, ಇವರು ಅಣ್ಣ-ತಂಗಿ ಎಂದು ತಿಳಿದು ಬಂದಿದೆ. ಈ ದುರ್ಘಟನೆಯು ಮನೆಯ ಮುಂದೆ ಆಟವಾಡುತ್ತಿದ್ದ ವೇಳೆಯಲ್ಲಿ ಸಂಭವಿಸಿದ್ದು, ನೀರಿನ ಸಂಪ್ ತೆರೆದಿತ್ತು ಎನ್ನಲಾಗಿದೆ. ಈ ವೇಳೆ ಆಯ ತಪ್ಪಿ ಬಿದ್ದಿರುವ ಇಬ್ಬರೂ ಮಕ್ಕಳೂ ಅಮಾನುಷವಾಗಿ ಸಾವನ್ನಪ್ಪಿದ್ದಾರೆ. 
 
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ನಗರ ಪೊಲೀಸರು, ಸ್ಥಳದ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 
 

Share this Story:

Follow Webdunia kannada