ಮೀನು ಹಿಡಿಯಲು ಹೋಗಿ ಬಾಲಕರಿಬ್ಬರ ದಾರುಣ ಸಾವು

Webdunia
ಮಂಗಳವಾರ, 11 ಏಪ್ರಿಲ್ 2023 (09:35 IST)
ರಾಮನಗರ : ಕೆರೆಗೆ ಮೀನು ಹಿಡಿಯಲು ಹೋಗಿದ್ದ ಮೂವರ ಪೈಕಿ ಇಬ್ಬರು ಮಕ್ಕಳು ನೀರು ಪಾಲಾಗಿರುವ ದಾರುಣ ಘಟನೆ ಹಾರೋಹಳ್ಳಿಯ ಮಾರಸಂದ್ರ ಗ್ರಾಮದಲ್ಲಿ ನಡೆದಿದೆ.
 
ಮೃತಪಟ್ಟ ಬಾಲಕರನ್ನು ಪಟ್ಟಣದ ಸರ್ಕಲ್ ನಿವಾಸಿಗಳಾದ ಇಸ್ಮಾಯಿಲ್(13) ಮತ್ತು ಆಫ್ರಿದ್(12) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಮೀನು ಹಿಡಿಯುವ ಆಸೆಯಿಂದ ಪಟ್ಟಣದ ಮಸೀದಿ ಸರ್ಕಲ್ ನಿವಾಸಿಗಳಾದ ಮೂವರು ಬಾಲಕರು ಮಾರಸಂದ್ರ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾರೆ.

ಈ ವೇಳೆ ಒಬ್ಬ ಬಾಲಕ ಕೆರೆಯಲ್ಲಿದ್ದ ಸತ್ತೆಗೆ ಸಿಲುಕಿ ಮುಳುಗುವುದನ್ನು ಕಂಡು ಮತ್ತೊಬ್ಬ ಬಾಲಕ ಆತನನ್ನು ರಕ್ಷಿಸಲು ತೆರಳಿದ್ದಾನೆ. ಇದನ್ನು ಕಂಡ ಇನ್ನೊಬ್ಬ ಬಾಲಕ ಭಯಗೊಂಡು ಓಡಿದ್ದಾನೆ. ಈ ವೇಳೆ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕೆಲವರು ರಕ್ಷಣೆಗಾಗಿ ಓಡೋಡಿ ಬಂದಿದ್ದಾರೆ. ಆದರೆ ಅಷ್ಟರಲ್ಲೇ ಬಾಲಕರಿಬ್ಬರ ಪ್ರಾಣಪಕ್ಷಿ ಹಾರಿ ಹೋಗಿದೆ. 

ಈ ಸಂಬಂಧ ಸ್ಥಳೀಯರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಬಾಲಕರಿಬ್ಬರ ಶವವನ್ನು ಹೊರತೆಗೆದಿದ್ದಾರೆ. ಮೃತ ಬಾಲಕರ ಪೋಷಕರು ಮೆಕ್ಕಾ ಮದೀನ ತೀರ್ಥಯಾತ್ರೆಗೆ ತೆರಳಿದ್ದು, ಸಾರ್ವಜನಿಕರು ಘಟನೆ ಕುರಿತು ಮರುಕ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಬಗ್ಗೆ‌ ಕ್ರಿಕೆಟ್ ದೇವರು ಸಚಿನ್ ಮಹತ್ವದ ಪೋಸ್ಟ್‌

ಧರ್ಮೇಂದ್ರ ಪ್ರಧಾನ್‌ರನ್ನು ಕೆಳಗಿಳಿಸದಿದ್ದರೆ, ಮುಂದೆ ಪ್ರಧಾನಿ ರಾಜೀನಾಮೆಯೆ ನಮ್ಮ ಡಿಮ್ಯಾಂಡ್ ಆಗಿರುತ್ತೆ: ಅಭಿಜೀತ್

ಮದುವೆಯಾದವರು ಹನಿಮೂನ್‍ಗೆ ಒಂದು ಬಾರಿ ವಿದೇಶಕ್ಕೆ ತೆರಳಿದರೆ ರಾಹುಲ್ ಗಾಂಧಿ ಪದೇಪದೇ ಹೊರದೇಶಕ್ಕೆ ಹೋಗುತ್ತಾರೆ

ಕೊತ್ವಾಲ್ ರಾಮಚಂದ್ರ ಅವರ ಶಿಷ್ಯ ಏಡ್ಸ್ ಇಂಜೆಕ್ಷನ್ ತಲಗುಲಿಸಿದ ಮೇಲೆ ಅಶೋಕ್ ಗೆ ಬುದ್ಧಿ ಭ್ರಮಣೆಯಾಗಿದೆ: ಬಿಕೆ ಹರಿಪ್ರಸಾದ್

ರಾತ್ರಿ ಪೂರ್ತಿ ಅನಿಲ ಸೋರಿಕೆ, ಬೆಳಗೆದ್ದು ಲೈಟ್ ಆನ್ ಮಾಡುತ್ತಿದ್ದ ಹಾಗೇ ಆವರಿಸಿದ ಬೆಂಕಿ, ಮುಂದೆ ಆಗಿದ್ದು ಭಾರೀ ಅವಘಡ

ಮುಂದಿನ ಸುದ್ದಿ
Show comments