ಟ್ವಿಟರ್ ಸಿಇಒ ಹುದ್ದೆ ರಾಜೀನಾಮೆಗೆ ಸಿದ್ದ- ಇಲಾನ್ ಮಸ್ಕ್

Webdunia
ಬುಧವಾರ, 21 ಡಿಸೆಂಬರ್ 2022 (15:28 IST)
ನ್ಯೂಯಾರ್ಕ್ ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ಇಲಾನ್ ಮಸ್ಕ್ ಘೋಷಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. 'ಯಾರಾದರೊಬ್ಬರು ನನ್ನ ಕೆಲಸವನ್ನು ತೆಗೆದುಕೊಳ್ಳುವಷ್ಟು ಮೂರ್ಖರು ಎಂದು ಕಂಡು ಬಂದ ತಕ್ಷಣ ನಾನು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ' ಮಸ್ಕ್ ಹೇಳಿದ್ದಾರೆ. ಹುದ್ದೆ ತೊರೆದ ನಂತರ ನಾನು ಸಾಫ್ಟ್ ವೇರ್ ತಂಡಗಳನ್ನು ಮುನ್ನಡೆಸುತ್ತೇನೆ' ಎಂದು ಕೂಡ ಹೇಳಿದ್ದಾರೆ. ಮಸ್ಕ್ ಸಿಇಒ ಸ್ಥಾನದಿಂದ ಕೆಳಗಿಳಿಯುವುದು ಸೂಕ್ತವೆಂದು ಹೆಚ್ಚಿನ ಬಳಕೆದಾರರು ಸಮೀಕ್ಷೆಯಲ್ಲಿ ಮತ ಚಲಾಯಿಸಿರುವುದರಿಂದ ಅವರು ಈ ನಿರ್ಧಾರ ಮಾಡಿದ್ದಾರೆ. ಟ್ವಿಟರ್​​ ಮಾಲೀಕತ್ವ ಪಡೆದ ಎರಡು ತಿಂಗಳಲ್ಲೇ ಕೋಟ್ಯಧಿಪತಿ ಮಸ್ಕ್ ಅವರಿಗೆ ಇದೊಂದು ಭಾರಿ ಹಿನ್ನಡೆ ಎನ್ನಲಾಗುತ್ತಿದೆ. ಭಾನುವಾರ ಸಂಜೆ ಆರಂಭವಾದ ಈ ಸಮೀಕ್ಷೆಯಲ್ಲಿ 1.75 ಕೋಟಿ ಬಳಕೆದಾರರು ಪಾಲ್ಗೊಂಡು ಮತ ಚಲಾಯಿಸಿದ್ದಾರೆ. ಟ್ವಿಟರ್ ಸಿಇಒ ಸ್ಥಾನವನ್ನು ಮಸ್ಕ್ ತೊರೆಯಬೇಕೆಂಬುದರ ಪರವಾಗಿ ಶೇ 57.5ರಷ್ಟು ಬಳಕೆದಾರರು ಮತ ಚಲಾಯಿಸಿದರೆ, ಶೇ 42.5ರಷ್ಟು ಬಳಕೆದಾರರು ಸಿಇಒ ಸ್ಥಾನ ತೊರೆಯಬಾರದೆಂದು ಮತ ಚಲಾಯಿಸಿದ್ದರು. 17,502,391 ಬಳಕೆದಾರರು ಮತ ಚಲಾಯಿಸಿದ್ದರು. ಈ ಸಮೀಕ್ಷೆಯಲ್ಲಿ ಹೊರಹೊಮ್ಮುವ ಫಲಿತಾಂಶಕ್ಕೆ ಬದ್ಧವಾಗಿರುವುದಾಗಿಯೂ ಅವರು ಘೋಷಿಸಿದ್ದರು..

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಅಕ್ಕನನ್ನು ಮಾರಾಟ ಮಾಡ್ಬೇಡಿ, ಅಕ್ಕನ ಮಾತು ಕೇಳಿದ್ರೆ ಕಣ್ಣೀರು ಬರುತ್ತೆ

ವಿಧಾನಸಭೆ ಚುನಾವಣೆ, ಬಿಹಾರದಲ್ಲಿ ರಾಹುಲ್ ಗಾಂಧಿ ಮೊದಲ ರ್ಯಾಲಿ

ದ್ವೇಷ ಭಾಷಣ ಮಾಡುವವರ ಬಗ್ಗೆ ಮಂಗಳೂರಿನಲ್ಲಿ ಗುಡುಗಿದ ಸಿದ್ದರಾಮಯ್ಯ

ಮಹತ್ವದ ಪೋಸ್ಟ್ ಹಂಚಿಕೊಂಡ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌

ತನ್ನವರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬದ ಜತೆ ವಿಜಯ್ ನಡೆ ಹೇಗಿತ್ತು ಗೊತ್ತಾ

ಮುಂದಿನ ಸುದ್ದಿ
Show comments