Webdunia - Bharat's app for daily news and videos

Install App

ಬೇರೆ ಮದುವೆಯಾಗಬಾರದೆಂದು ನಾಲಿಗೆ, ತುಟಿ ಕಚ್ಚಿದನಂತೆ!

Webdunia
ಸೋಮವಾರ, 9 ಜನವರಿ 2017 (10:13 IST)
ಕೆ.ಜಿ ಹಳ್ಳಿಯಲ್ಲಿ ನಡೆದಿದ್ದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪರಷ್ಪರ ಪ್ರೀತಿಸುತ್ತಿದ್ದ ಯುವಕ-ಯುವತಿ ಮದುವೆಯಾಗುವ ಉದ್ದೇಶದಿಂದ ಈ ನಾಟಕವನ್ನಾಡಿದ್ದರು ಎಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
 
ಹೊಸ ವರ್ಷದಂದು ನಡೆದ ಎರಡು ಪ್ರತ್ಯೇಕ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದೇಶಾದ್ಯಂತ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತೀವ್ರ ತನಿಖೆ ನಡೆಸಿದ ಪೊಲೀಸರಿಗೆ ಯುವತಿ ಗೊಂದಲಮಯ ಹೇಳಿಕೆ ನೀಡುತ್ತಿದ್ದುದು ಹಲವು ಅನುಮಾನಗಳನ್ನು ಹುಟ್ಟಿಹಾಕಿತ್ತು. ಯುವಕನೊಬ್ಬ ಹಿಂಬಾಲಿಸಿ ತಬ್ಬಿ ತುಟಿ, ನಾಲಿಗೆ ಕಚ್ಚಿದ್ದ ಎಂದಿದ್ದ ಯುವತಿ ಮರುದಿನ ನಾನೇ ಕಚ್ಚಿಕೊಂಡೆ ಎಂದಿದ್ದಳು.
 
ಪೊಲೀಸರು ನೀಡಿದ್ದ ಸಿಸಿ ಟಿವಿ ದೃಶ್ಯಾವಳಿಯಲ್ಲಿದ್ದ ಆರೋಪಿಯನ್ನು ಗುರುತಿಸಿದ ಯುವತಿಯ ಮನೆಯವರು ಆತ ಇರ್ಷಾದ್ ಎಂಬಾತ ಎಂದು ಗುರುತಿಸಿದ್ದರು. ಯುವತಿಯ ಮೊಬೈಲ್ ಕಾಲ್ ವಿವರ ಪರಿಶೀಲಿಸಿದಾಗ ಆಕೆ ಹಿಂದಿನ ದಿನ ರಾತ್ರಿ ಇರ್ಷಾದ್‌ನೊಂದಿಗೆ ಮಾತನಾಡಿರುವುದು ಬೆಳಕಿಗೆ ಬಂದಿತ್ತು .
 
ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾವಿಬ್ಬರು ಪ್ರೀತಿಸುತ್ತಿದ್ದೇವೆ. ಆಕೆಯನ್ನು ಬೇರೆ ಯಾರೂ ಮದುವೆಯಾಗಬಾರದೆಂದು ಹೀಗೆ ಮಾಡಿದ್ದೇನೆ ಎಂದು ಬಾಯ್ಬಿಟ್ಟಿದ್ದಾನೆ.
 
ಇರ್ಷಾದ್‌ಗೆ ಈಗಾಗಲೇ ಮದುವೆಯಾಗಿದ್ದು ಮೂರು ವರ್ಷದಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಬೇರೆ ಯಾರೂ ಮದುವೆಯಾಗುವುದಿಲ್ಲ. ಪತ್ನಿಯನ್ನು ಒಪ್ಪಿಸಿ ತಾನೇ ಮದುವೆಯಾಗಬಹುದು ಎಂಬ ಉದ್ದೇಶದಿಂದ ಆತ ಹೀಗೆ ಮಾಡಿದ್ದಾನೆ. ಆತನ ತಂತ್ರಕ್ಕೆ ಯುವತಿಯೂ ಸಾಥ್ ನೀಡಿದ್ದಾಳೆ. 
 
ಪೊಲೀಸ್ ಬಂಧನದಲ್ಲಿರುವ ಆರೋಪಿಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುತ್ತದೆ. 
 
ಆತನ ಮೇಲೆ ಆರೋಪ ಮಾಡಿದಂತಹ ಯುವತಿ ಮೇಲೆ ಸಹ ಕೇಸ್ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಸದ್ಯದಲ್ಲಿಯೇ ಯುವತಿ ಮೇಲೆ ಕಾನೂನು ದುರ್ಬಳಕೆ, ಸಮಾಜದ ಮೇಲೆ ಕೆಟ್ಟ ಪರಿಣಾಮ
,ಪೊಲೀಸರ ಸಮಯ ವ್ಯರ್ಥ ಸೇರಿದಂತೆ ಇತರ ಆರೋಪಗಳಡಿ ದೂರು ದಾಖಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ವಾರಂತ್ಯಕ್ಕೆ ಹವಾಮಾನ ಇಲಾಖೆಯಿಂದ ಗುಡ್ ನ್ಯೂಸ್

ಈ ಕಾರಣಕ್ಕೆ ಜಾತಿ ಗಣತಿ ಆಗಬೇಕು ಅಂತಿದ್ರು ರಾಹುಲ್ ಗಾಂಧಿ: ಮಧು ಬಂಗಾರಪ್ಪ

ಇಂಡೋ- ಪಾಕ್ ಗಡಿಯಲ್ಲಿ ಶಾಂತವಾಗಿ ನೆಲೆಸಿದ ಸರ್ಕಾರಿ ಶಾಲೆ, ಯುದ್ದ ಸಂದರ್ಭದಲ್ಲಿ ಏನ್‌ ಮಾಡ್ತಾರೆ ಗೊತ್ತಾ

Mangaluru Suhas Shetty: ಸುಹಾಸ್ ಶೆಟ್ಟಿ ಹತ್ಯೆಗೆ ಹಂತಕರು ಭಯಾನಕ ಪ್ಲ್ಯಾನ್ ಮಾಡಿದ್ದ ಹಂತಕರು: ಮೀನಿನ ಟೆಂಪೊ ಮಧ್ಯೆ ಬಂದಿದ್ದೇಕೆ

Suhas Shetty, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ: ಸಿದ್ದರಾಮಯ್ಯ

ಮುಂದಿನ ಸುದ್ದಿ