Select Your Language

Notifications

webdunia
webdunia
webdunia
webdunia

ಬಾಗಲಕೋಟೆಯಲ್ಲಿ ಕ್ರೂಸರ್, ಟಂಟಂ ಡಿಕ್ಕಿಗೆ ಮೂವರ ಬಲಿ

ಬಾಗಲಕೋಟೆಯಲ್ಲಿ ಕ್ರೂಸರ್, ಟಂಟಂ  ಡಿಕ್ಕಿಗೆ ಮೂವರ ಬಲಿ
, ಶುಕ್ರವಾರ, 2 ಮೇ 2014 (16:18 IST)
ಬಾಗಲಕೋಟೆ: ಬಾಗಲಕೋಟೆಯಲ್ಲಿ ಕ್ರೂಸರ್ ಮತ್ತು ಟಂಟಂ ನಡುವೆ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದು, 10 ಮಂದಿ ಪ್ರಯಾಣಿಕರಿಗೆ ಗಾಯವಾಗಿದ್ದು, ಆರು ಮಂದಿಯ ಸ್ಥಿತಿ ಗಂಭೀರವಾಗಿದೆ. ಟಂಟಂನಲ್ಲಿದ್ದ ಪ್ರಯಾಣಿಕರು ಬಿಜಾಪುರದಿಂದ ಬಾಗಲಕೋಟೆಗೆ ಬರುತ್ತಿದ್ದರು.

ಬಾಗಲಕೋಟೆಯ ಅಚನೂರು ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ.  ಟಂಟಂನಲ್ಲಿ 15ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು.  ಗಾಯಾಳುಗಳನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.  

ಕ್ರೂಸರ್‌ನಲ್ಲಿ ಮದುವೆ ಮುಗಿಸಿಕೊಂಡು ದಿಬ್ಬಣವೊಂದು ಬರುತ್ತಿದ್ದಾಗ ಅದಕ್ಕೆ ಟಂಟಂ ಡಿಕ್ಕಿಹೊಡೆಯಿತೆಂದು ಹೇಳಲಾಗಿದೆ.ಬಾಗಲಕೋಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada