Select Your Language

Notifications

webdunia
webdunia
webdunia
webdunia

ರೈಲು ಅಪಘಾತ ಪ್ರಕರಣ: ಮಧ್ಯಾಹ್ನ ಭೇಟಿ ನೀಡಲಿರುವ ಸಿಎಂ

ರೈಲು ಅಪಘಾತ ಪ್ರಕರಣ: ಮಧ್ಯಾಹ್ನ ಭೇಟಿ ನೀಡಲಿರುವ ಸಿಎಂ
ಬೆಂಗಳೂರು , ಶುಕ್ರವಾರ, 13 ಫೆಬ್ರವರಿ 2015 (12:17 IST)
ಬೆಂಗಳೂರು-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು ಇಲ್ಲಿನ ಆನೆಕಲ್ ನಗರದ ಬಿದಿರೆಗೆರೆಯ ಬಳಿ ಅಪಘಾತಕ್ಕೀಡಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಅಧಿವೇಶನ ಇರುವ ಕಾರಣ ನಾನು ಮಧ್ಯಾಹ್ನ ಆಸ್ಪತ್ರೆ ಹಾಗೂ ಘಟನಾ ಸ್ಥಳಖ್ಕೆ ಭೇಟಿ ನೀಡಲಿದ್ದಾನೆ ಎಂದಿದ್ದಾರೆ. 
 
ಪ್ರಕರಣ ಸಂಬಂಧ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನು ಘಟನೆಯ ಬಗಿಗೆ ವರದಿಯನ್ನು ಜಿಲ್ಲಾಧಿಕಾರಿಗಳಿಂದ ಡೆಯುತ್ತಿದ್ದು, ಈಗಾಗಲೇ 6 ಮಂದಿ ಮೃತಪಟ್ಟಿದ್ದಾರೆ. ಇನ್ನು ರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ರಾಜ್ಯದ ವಿಪತ್ತು ನಿರ್ವಹಣಾ ದಳ, ಪೊಲೀಸರು, ವೈದ್ಯರು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಕಾರ್ಯಚರಣೆ ನಡೆಸಲಾಗುತ್ತಿದ್ದು, ಕಾರ್ಯಚರಣೆಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಇನ್ನು ಘಟನೆಯನ್ನು ಪರಿಶೀಲಿಸಿದ ಬಳಿಕ ಮೃತರ ಹಾಗೂ ಗಾಯಾಳುಗಳಿಗೆ ಪರಿಹಾರ ಘೋಷಿಸಲಾಗುವುದು ಎಂದರು. 
 
ಬೆಳಗ್ಗೆ 7.30 ರ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ರಾಜಧಾನಿ ಬೆಂಗಳೂರು ನಗರ ಜಿಲ್ಲೆಯ ಆನೆಕಲ್ ವ್ಯಾಪ್ತಿಯ ಬಿದಿರಗೆರೆ ಎಂಬ ಗ್ರಾಮದ ಬಳಿ ನಡೆದಿತ್ತು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಶರ್ಮಾಳಾ ಮತ್ತು ಮಗು, ಅಮನ್, ಆಂಟನಿ, ಟೋನಿ, ಪೋಲ್ ನೀಲನ್, ಸೆಲ್ವರಾಜು, ಕಿಶೋರ ಸೇರಿದಂತೆ 8 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು. ಗಾಯಾಳುಗಳನ್ನು ಇಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಹಲವರು ಬೋಗಿಯಲ್ಲಿಯೇ ಸಿಲುಕಿದ್ದು, ತಮಿಳುನಾಡು ಹಾಗೂ ಕರ್ನಾಟಕ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳದ್ಲ್ಲಿ ತಮಿಳುನಾಡು ಹಾಗದೂ ಕರ್ನಾಟಕದ ಸರ್ಕಾರಗಳ 50ಕ್ಕೂ ಹೆಚ್ಚು ಅಂಬಲನ್ಸ್‌ಗಳು ಸ್ಥಳದಲ್ಲಿವೆ. 

Share this Story:

Follow Webdunia kannada