Select Your Language

Notifications

webdunia
webdunia
webdunia
webdunia

ಹೈ.ಕರ್ನಾಟಕ ಶಿಕ್ಷಣ ಸಂಸ್ಥೆಗೆ ನಾಳೆ ಚುನಾವಣೆ

ಹೈ.ಕರ್ನಾಟಕ ಶಿಕ್ಷಣ ಸಂಸ್ಥೆಗೆ ನಾಳೆ ಚುನಾವಣೆ
ಕಲಬುರ್ಗಿ , ಗುರುವಾರ, 26 ಮಾರ್ಚ್ 2015 (17:13 IST)
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗಳ ಹಲವು ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯುತ್ತಿದ್ದು, 9 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. 
 
ಪ್ರತಿ ಮೂರು ವರ್ಷಕ್ಕೊಮ್ಮೆ ಈ ಚುನಾವಣೆಯನ್ನು ನಡೆಸಲಾಗುತ್ತಿದ್ದು, ಓರ್ವ ಅಧ್ಯಕ್ಷ ಹಾಗೂ ಇಬ್ಬರು ಉಪಾಧ್ಯಕ್ಷ ಹಾಗೂ 13 ಮಂದಿ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ. 
 
ಸಂಸ್ಥೆಯ ಸದಸ್ಯರಾಗಿರುವ 1750 ಮಂದಿ ಮತದಾನ ಮಾಡುತ್ತಿದ್ದು, ರಾಜ್ಯದ ಉತ್ತರ ಭಾಗದ ಮೂರು ಪ್ರಮುಖ ಜಿಲ್ಲೆಗಳಾದ ಕಲ್ಬುರ್ಗಿ, ಬೀದರ್ ಮತ್ತು ರಾಯಚೂರುಗಳಲ್ಲಿ ಚುನಾವಣೆ ನಡೆಯಲಿದೆ. 
 
ಚುನಾವಣೆಯು ಚುನಾವಣಾಧಿಕಾರಿ ವಿ.ಡಿ. ಮೈತ್ರಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಬೆಳಗ್ಗೆ 9 ಗಂಟೆಯಿಂದ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಫಲಿತಾಂಶವು ಮಾರ್ಚ್ 28ಕ್ಕೆ ಹೊರ ಬೀಳಲಿದೆ. 
 
ಇನ್ನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿರುವ ಬಸವರಾಜ್ ಬೀಮಳ್ಳಿ ಮತ್ತು ಶರದ್ ರಮಾಪೂರೆ ಅವರ ನಡುವೆ ಜಿದ್ದಾಜಿದ್ದಿ ನಡೆಯಲಿದ್ದು, ಇಬ್ಬರಲ್ಲಿಯೂ ಉತ್ತಮ ಬೆಂಬಲ ಬಣವಿದೆ ಎನ್ನಲಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ ನಾಲ್ವರು ಸ್ಪರ್ಧೆಗಿಳಿದಿದ್ದಾರೆ. ಈ ಹಿಂದೆ ಶಶೀಲ್ ನಮೋಶಿ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದ್ದರು. ಅಲ್ಲದೆ ಎರಡು ಬಾರಿ ಅಧಿಕಾರ ಅನುಭವಿಸಿದ್ದರು. ಆದರೆ ಮೂರನೇ ಬಾರಿ ಸ್ಪರ್ಧಿಸಲು ಅವಕಾಶವಿಲ್ಲದ ಕಾರಣ ಈ ಬಾರಿ ನಮೋಶಿ ಸ್ಪರ್ಧೆಗಿಳಿದಿಲ್ಲ. 

Share this Story:

Follow Webdunia kannada