Webdunia - Bharat's app for daily news and videos

Install App

ನಾಳೆ ಹೋಟೆಲ್, ಬೇಕರಿ, ಮೆಡಿಕಲ್ ಶಾಪ್‌ಗಳು ಬಂದ್

Webdunia
ಸೋಮವಾರ, 29 ಮೇ 2017 (15:25 IST)
ಕೇಂದ್ರ ಸರಕಾರ ಸಾಮಾನ್ಯ ಹೋಟೆಲ್‌ಗಳ ಮೇಲೆ ದುಬಾರಿ ತೆರಿಗೆ ಹೇರಿರುವುದನ್ನು ವಿರೋಧಿಸಿ ನಾಳೆ ಹೋಟೆಲ್‌ಗಳನ್ನು ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದು ನಗರ ಹೋಟೆಲ್ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಹೇಳಿದ್ದಾರೆ.
 
ನಾಳೆ ಬೆಳಿಗ್ಗೆ ಐದು ಗಂಟೆಯಿಂದ ಹೋಟೆಲ್‌ಗಳು ರಸ್ತೆ ಬದಿಯ ಬೇಕರಿ ಮತ್ತು ಸಣ್ಣಪುಟ್ಟ ಆಹಾರ ಕೇಂದ್ರಗಳು ಕೂಡಾ ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ಗ್ರಾಹಕರು ತೀವ್ರ ತೊಂದರೆ ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಲಿದೆ.
 
ಹವಾನಿಯಂತ್ರಿತ ಹೋಟೆಲ್‌ಗಳಿಗೆ ಶೇ.18 ರಷ್ಟು ತೆರಿಗೆ ದರ ವಿಧಿಸಿದ್ದರೆ, ಸಾಮಾನ್ಯ ಹೋಟೆಲ್‌ಗಳಿಗೆ ಶೇ.12 ರಷ್ಟು ತೆರಿಗೆ ದರವನ್ನು ವಿಧಿಸಿರುವ ಕೇಂದ್ರ ಸರಕಾರದ ಕ್ರಮ ಅವೈಜ್ಞಾನಿಕ ಎಂದು ಕಿಡಿಕಾರಿದ್ದಾರೆ.
 
ಮೆಡಿಕಲ್ ಶಾಪ್ ಬಂದ್
 
ಕೇಂದ್ರ ಸರಕಾರ ಆನ್‌ಲೈನ್ ಔಷಧಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಮೆಡಿಕಲ್ ಶಾಪ್‌ ಮಾಲೀಕರು ಕೂಡಾ ಬಂದ್‌ಗೆ ಕರೆ ನೀಡಿದ್ದಾರೆ.
 
ಕೇಂದ್ರ ಸರಕಾರ ಆನ್‌ಲೈನ್ ಔಷಧಿ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ಮೆಡಿಕಲ್ ಮಾಲೀಕರು ನಷ್ಟ ಅನುಭವಿಸಬೇಕಾಗುತ್ತದೆ. ಇದನ್ನು ಯಾವುದೇ ರೀತಿಯಿಂದಲೂ ಸಹಿಸಲು ಸಾಧ್ಯವಿಲ್ಲ ಎಂದು ಮೆಡಿಕಲ್ ಶಾಪ್ ಮಾಲೀಕರ ಸಂಘದ ಅಧ್ಯಕ್ಷ ಮಾಯಣ್ಣ ತಿಳಿಸಿದ್ದಾರೆ.
 
ತೆರಿಗೆ ದರ ಏರಿಕೆ ವಿರೋಧಿಸಿ ಟೌನ್‌ಹಾಲ್‌ ಬಳಿ ಸಾವಿರಾರು ಸಂಖ್ಯೆಯಲ್ಲಿ ಹೋಟೆಲ್ ಮಾಲೀಕರು ಪ್ರತಿಭಟನೆ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಮೂಲಗಳು ತಿಳಿಸಿವೆ.
 
ನಾಳೆ ಕೇವಲ ಸರಕಾರಿ ಸಂಚಾಲಿತ ಮೆಡಿಕಲ್ ಶಾಪ್‌ಗಳು ಮಾತ್ರ ತೆರೆದಿರಲಿವೆ ಎಂದು ಮೂಲಗಳು ತಿಳಿಸಿವೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಹೆಸರು ವೋಟರ್ ಲಿಸ್ಟ್ ನಲ್ಲಿಲ್ಲ ಎಂದು ಸುಳ್ಳು ಹೇಳಿದ್ರಾ ತೇಜಸ್ವಿ ಯಾದವ್

ಜಾರ್ಖಾಂಡ್ ಮಾಜಿ ಸಿಎಂ ಶಿಬು ಸೊರೇನ್ ಇನ್ನಿಲ್ಲ

ವೋಟ್ ಗಾಗಿ ಟಿಪ್ಪು ಸಂತತಿಯನ್ನು ವೈಭವೀಕರಿಸೋದು ಕಾಂಗ್ರೆಸ್ ಜಾಯಮಾನ: ವಿಜಯೇಂದ್ರ

ಸೋನಿಯಾ ಗಾಂಧಿ ಪ್ರಧಾನಿ ಪದವಿ ಬಿಟ್ಟ ತ್ಯಾಗಮಯಿ ಎಂದು ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ ಟಾಂಗ್

ಸುಧಾಮೂರ್ತಿ ಹೇಳುವ ಈ ಮೂರು ಜೀವನಪಾಠವನ್ನು ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments