ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಿಸುವುದಕ್ಕೆ ಈಗಾಗಲೇ ಮಹೂರ್ತ ಫಿಕ್ಸ್ ಮಾಡಲಾಗಿದೆ. ನಾಳೆ ಮಧ್ಯಾಹ್ನ 3 .30 ಕ್ಕೆ ಫಲಿತಾಂಶ ಪ್ರಕಟಿಸುವುದಾಗಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಘೋಷಣೆ ಮಾಡಿದೆ. ಜೂನ್ 19 ಮತ್ತು 22 ರಂದು ಕೊರೋನ ಕಾರಣದಿಂದ ಕೆ ಪಿ ಎಸ್ ಸಿ ಮಾದರಿ ನಡೆದಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆ. ಇನ್ನೂ ಈ ಬಾರಿ 99.65% ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ರು. 8.71 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ನಲಿ ಕೊರೊನಾ ಆತಂಕದಿಂದ ನಡೆದಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ನೂತನ ಸಚಿವರಿಂದ ನಾಳೆ ಘೋಷಣೆಯಾಗಲಿದೆ.ಇನ್ನೂ ಫಲಿತಾಂಶವನ್ನ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ sslc.karnataka.gov.in ಲ್ಲಿ ನೋಡಬಹುದು.