ನಾಳೆ ನಾನು ಬೆಂಗಳೂರಿನಲ್ಲಿ ಲಭ್ಯವಿದ್ದೇನೆ, ಹೀಗಂದಿದ್ಯಾಕೆ ಸ್ಪೀಕರ್ ಯುಟಿ ಖಾದರ್

Sampriya
ಬುಧವಾರ, 29 ಅಕ್ಟೋಬರ್ 2025 (19:03 IST)
Photo Credit X
ಮಂಗಳೂರು: ವಿಧಾನಸಭಾ ಕಾರ್ಯಾಲಯದ ಮೂಲಕ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾರಿಗಾದರೂ ಸಂಶಯವಿದ್ದಲ್ಲಿ, ಅಥವಾ ಮಾಹಿತಿ ಕೇಳುವುದಿದ್ದರೆ ನಾಳೆ ನಾನು ಬೆಂಗಳೂರಿನಲ್ಲಿ ಲಭ್ಯವಿದ್ದೇನೆ.  ಕಚೇರಿಗೆ ಬಂದು ಲಿಖಿತವಾಗಿ ದೂರು ಸಲ್ಲಿಸಲಿ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.

ವಿಧಾನಸಭೆಯ ಮಾಜಿ ಅಧ್ಯಕ್ಷರೂ ಆಗಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭಾ ಕಾರ್ಯಾಲಯದ ಬಗ್ಗೆ ಮಾಡಿರುವ ಆರೋಪ ಸಂಬಂಧ ಇಂದು ಅವರು ಪ್ರತಿಕ್ರಿಯಿಸಿ,  ರಾಜಕೀಯ ವ್ಯಕ್ತಿಯಾಗಿರುವ ಶಾಸಕ, ಸಂಸದರಾಗಿ ಗೌರವಯುತ ಸ್ಥಾನದಲ್ಲಿದ್ದರು.  ಅವರ ಆಲೋಚನೆಗಳಿಗೆ ಗೌರವವಿಸುತ್ತಿದ್ದು, ಹೇಳಬೇಕಾದ ವಿಚಾರಗಳನ್ನು ಲಿಖಿತವಾಗಿ ನೀಡಿದರೆ, ಅದರಲ್ಲಿ ಏನಿದೆ ಪರಿಶೀಲಿಸುತ್ತೇನೆ. ಅದರಂತೆ ವಿಧಾನಸಭೆ ಗೌರವ ಹೆಚ್ಚು ಮಾಡಲು ಕ್ರಮ ವಹಿಸುತ್ತೇನೆ. ಈ ಕುರಿತ ಸಕಾರಾತ್ಮಕ ಚರ್ಚೆಗೆ ಸಿದ್ಧ ಎಂದರು.

ಕರ್ನಾಟಕ ವಿಧಾನಸಭೆಗೆ ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಗೌರವವಿದೆ. ಎಲ್ಲ ರೋಗಕ್ಕೆ ಮದ್ದು ಇದೆ. ಅಸೂಯೆಗೆ ಮದ್ದಿಲ್ಲ. ಹೊಸತಾಗಿ ಮನೆ ನಿರ್ಮಿಸುವವರು ಕಟ್ಟಡಕ್ಕೆ ದೃಷ್ಟಿ ಬೀಳಬಾರದು ಎಂದು ದೃಷ್ಟಿಬೊಂಬೆ ಕಟ್ಟುತ್ತಾರೆ. ಅವರ ಆರೋಪ ಕಟ್ಟಡದ ದೃಷ್ಟಿಬೊಂಬೆ ಇದ್ದಂತೆ ಎಂದರು.

ರಾಜಕೀಯವಾಗಿ ಹೇಳಲು ನನಗೂ ಬಹಳಷ್ಟು ವಿಚಾರವಿದೆ.  ರಾಜಕೀಯವಾಗಿ ಅವರು ಮಾತನಾಡಬಹುದು. ಆದರೆ ನಾನು ಸಂವಿಧಾನಬದ್ಧ ಹುದ್ದೆಯಲ್ಲಿದ್ದೇನೆ. ನಾನೀಗ ಪ್ರತಿಪಕ್ಷದ ಮಿತ್ರ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯದ ಸಿಎಂ ಇವರೇ ಆಗೋದು ಎಂದು ಭವಿಷ್ಯ ನುಡಿದ ಬಸನಗೌಡ ಪಾಟೀಲ ಯತ್ನಾಳ

ಮತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲಿ ನೃತ್ಯ ಮಾಡಕ್ಕೂ ಸೈ: ರಾಹುಲ್ ಗಾಂಧಿ ವ್ಯಂಗ್ಯ

ಕಾಲ್ತುಳಿತ ಸಂತ್ರಸ್ತರ ಭೇಟಿಯಾಗುತ್ತಿದ್ದ ಹಾಗೇ ಕುಗ್ಗಿದ ನಟ ವಿಜಯ್‌

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಸ್ವಯಂ ಘೋಷಿತ ದೇವಮಾನವ ಅಸಾರಾಂಗೆ ಬಿಗ್‌ ರಿಲೀಫ್‌

ನವೆಂಬರ್ ಕ್ರಾಂತಿ, ಅವನ ಹಣೆಯಲ್ಲಿ ಬರೆದ ಹಾಗೇ ಆಗುತ್ತದೆ: ಡಿಕೆ ಸುರೇಶ್‌

ಮುಂದಿನ ಸುದ್ದಿ
Show comments