ವೀಕ್ಷಕರೇ ನೀವೇನಾದರೂ ಮನೆಯಲ್ಲಿ ತಿಂದು ತಿಂದು ಬೇಜಾರಾಯ್ತು ಅಂತ ಹೋಟೆಲ್ ಕಡೆ ಹೋದರೆ ನಿಮ್ಮ ಜೆಬು ಸುಡೋದು ಗ್ಯಾರಂಟಿ. ಅರೆ ಇದೇನಪ್ಪಾ ಹೀಗೆ ಹೇಳ್ತಾ ಇದ್ದಾರೆ ಅಂತೀರಾ, ಹೌದು ಕಳೆದ ಕೆಲ ದಿನಗಳಿಂದ ದಿನಬಳಕೆ ಪದಾರ್ಥಗಳ ಬೆಲೆ ದಿನದಿಂದ ಗಗನಕ್ಕೆ ಏರುತ್ತಿವೆ. ಹೀಗಾಗಿ ಜನಸಾಮಾನ್ಯರಿಗೆ ಮಾತ್ರವಲ್ಲದೆ ಕೆಲವೊಂದು ಉದ್ಯಮಗಳಿಗೂ ಕೂಡ ಇದರ ಬಿಸಿ ತಟ್ಟಿದೆ. ದಿನದಿಂದ ದಿನಕ್ಕೆ ದುನಿಯಾ ತುಂಬಾ ಕಾಸ್ಟ್ಲಿಯಾಗುತ್ತಿದ್ದು, ಇದರ ಬೆನ್ನಲ್ಲೇ ಹೋಟೆಲ್‌ಗಳಲ್ಲಿ ಊಟ ತಿಂಡಿ, ಕಾಫಿ ಟೀ ಬೆಲೆಯೂ ಏರಿಸುವುದಕ್ಕೆ ಮೂಹೂರ್ತ ಫಿಕ್ಸ ಆಗಿದೆ. ಇದೇ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಹೋಟೆಲ್ ಊಟ, ತಿಂಡಿಗಳ ದರ ಏರಿಕೆಗೆ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.
ಬೆಂಗಳೂರಲ್ಲಿ ನಡೆದ ಹೋಟೆಲ್ ಮಾಲೀಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು. ಹೋಟೆಲ್ ಊಟ, ತಿಂಡಿಗಳ ಮೇಲೆ ಶೇ. 10ರಷ್ಟು ದರ ಹೆಚ್ಚಳಕ್ಕೆ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಹಾಲು, ಅಗತ್ಯ ವಸ್ತುಗಳ ಬೆಲೆಯ ಏರಿಕೆ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ದಗ ಏರಿಕೆಗೆ ಹೊಟೇಲ್ ಮಾಲೀಕರ ಸಂಘ ನಿರ್ಧರಿಸಿದ್ದು, ಆಗಸ್ಟ್ 1 ನೇ ತಾರೀಖಿನಿಂದ ಬೆಲೆ ಹೆಚ್ಚಳವಾಗಲಿದೆ. ಈಗಾಗಲೇ ದರ ಹೆಚ್ಚಿಸಿರೋ ಹೋಟೆಲ್‌ಗಳಲ್ಲಿ ಮತ್ತೆ ದರ ಹೆಚ್ಚಳ ಇರುವುದಿಲ್ಲ. ಕೇವಲ ಶೇಕಡಾ 10ರಷ್ಟು ಮಾತ್ರ ಬೆಲೆ ಹೆಚ್ಚಿಸಬೇಕು ಅಂತ ಹೋಟೆಲ್ ಮಾಲೀಕರ ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನು ಕಾಫಿ ಹಾಗೂ ಟೀ ಬೆಲೆ 3 ರೂಪಾಯಿ ಹೆಚ್ಚಳವಾಗಲಿದೆ, ತಿಂಡಿ ತಿನಿಸುಗಳ ಬೆಲೆ 5ರಿಂದ 10 ರೂಪಾಯಿಗಳಷ್ಟು ಏರಿಕೆಯಾಗಲಿದೆ. ಊಟದ ದರ 10 ರೂಪಾಯಿ ಏರಿಕೆಯಾಗಲಿದೆ ಇದಕ್ಕೆ ಗ್ರಾಹಕರು ಸಹಕರಿಸಬೇಕು. ಇಲ್ಲವಾದರೆ ಹೊಟೇಲ್ ಉದ್ಯಮ ನಡೆಸೊದು ಕಸ್ಟವಾಗುತ್ತದೆ ಎಂದು ಬೆಂಗಳೂರು ಹೊಟೇಲ್ ಮಾಲಿಕರ ಸಂಘದ ಅಧ್ಯಕ್ಷ ಪಿ,ಸಿ ರಾವ್ ತೀಳಿಸಿದ್ದಾರೆ.
ರಿಕೆಯಾಗಲಿರುವ ತಿಂಡಿಗಳ ದರಪಟ್ಟಿ
ಆಹಾರಗಳುಈಗಿನ ದರ ಎಷ್ಟು ರೂಪಾಯಿ ಏರಲಿದೆ?
ರೈಸ್ ಬಾತ್40 - 45
ಇಡ್ಲಿ (ಎರಡಕ್ಕೆ)30-40 - 40-50
ಸೆಟ್ ದೋಸೆ 60 - 65
ಬೆಣ್ಣೆ ಮಸಾಲೆ ದೋಸೆ 70 - 80
ಚೌಚೌ ಬಾತ್ 40-50 - 50-60
ಪೂರಿ50-60 - 55-65
ಮಿನಿ ಮೀಲ್ಸ್ 60-65 - 70-75
ಅನ್ನ-ಸಾಂಬಾರ್ 40-50 - 50-60
ಕರ್ಡ್ ರೈಸ್40-45- 45-55
ಚಪಾತಿ (ಎರಡಕ್ಕೆ)40-45 -50-60
ಬಿಸಿಬೇಳೆ ಬಾತ್40-45 -45-55
ಬಾದಾಮಿ ಹಾಲು15 - 18
ಕಾಫಿ-ಟೀ12-1515-18
ನೋಡಿದ್ರಲ್ಲ ವೀಕ್ಷಕರೇ ಇನ್ನು ಮುಂದೆ ಹೋಟೆಲ್ ಳಲ್ಲಿ ಈ ಎಲ್ಲದರ ಮೇಲೆ ನಿಮಗೆ ಐದರಿಂದ ಹತ್ತು ರೂಪಾಯಿ ದರ ಹೆಚ್ಚಳವಾಗಲಿದ್ದು, ಇನ್ನೂ ಮುಂದೆ ನಿಮಗೆ ಹೋಟೆಲ್ ಗಳಲ್ಲಿ ಹೋದರೆ ನಿಮ್ಮ ಜೆಬಿಗೆ ಕತ್ತರಿ ಬಿಳೊದು ಗ್ಯಾರಂಟಿ.