ಬೆಂಗಳೂರು: ರಾಜ್ಯ ರಾಜಧಾನಿಯ ಹಲವಡೆ ಇಂದು ಮಳೆಯಾಗುತ್ತಿದೆ. ಆರ್.ಟಿ. ನಗರ, ಕಾರ್ಪೊರೇಷನ್, ಟೌನ್‌ಹಾಲ್, ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಯಶವಂತಪುರ ಸೇರಿ ಹಲವೆಡೆ ಗುಡುಗು ಸಹಿತ ಮಳೆ ಸುರಿದಿದೆ.
ಬಿಸಿಲಿನಿಂದ ತತ್ತರಿಸಿದ್ದ ಸಿಲಿಕಾನ್ ಸಿಟಿ ಜನರಿಗೆ ಮಳೆರಾಯ ಕೊಂಚ ತಂಪೆರೆದಿದ್ದಾನೆ. ಸದ್ಯ ನಗರದೆಲ್ಲೆಡೆ ಮೋಡಕವಿದ ವಾತಾವರಣವಿದ್ದು, ಇಂದಿನಿಂದ ಐದು ದಿನ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸದ್ಯ ಮುಂಗಾರು ಕೇರಳ ಪ್ರವೇಶಿಸಿದೆ. ನಂತರ ನಮ್ಮ ರಾಜ್ಯಕ್ಕೆ ಪ್ರವೇಶಿಸಲಿದೆ. ನಾಳೆಯಿಂದ ರಾಜಾಧಾನಿಗೆ ಮುಂಗಾರು ಪ್ರವೇಶವಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಆನೇಕಲ್, ಚಂದಾಪುರ, ಅತ್ತಿಬೆಲೆ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಳೆ ಆಗಿದೆ. ಧಾರಾಕಾರ ಮಳೆಯಿಂದ ಚಂದಾಪುರದ ಬಳಿ ಸರ್ವಿಸ್ ರಸ್ತೆ ಜಲಾವೃತವಾಗಿದ್ದು, ಮಳೆ ನೀರು ಹೊರಹೋಗಲು ಜಾಗವಿಲ್ಲದೆ ರಸ್ತೆ ಕೆರೆಯಂತಾಗಿದೆ.
ಶಕೆ ಅನುಭವದಿಂದ ಬೆಸತ್ತಿದ್ದ ಜನರಿಗೆ ಇದೀಗ ವರುಣ ತಂಪೆರೆದಿದ್ದು, ಸಿಲಿಕಾನ್ ಸಿಟಿ ಕೂಲ್ ಕೂಲ್ ಆಗಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಡಿದ್ದು, ಮಳೆ ಹಿನ್ನಲೆ ಅಂಡರ್ ಪಾಸ್, ಫ್ಲೈ ಓವರ್ ಕೆಳಗಡೆ ಜನರು ಆಸರೆ ಪಡೆದಿದ್ದಾರೆ.<>