Select Your Language

Notifications

webdunia
webdunia
webdunia
webdunia

ಹುಬ್ಬಳ್ಳಿ ರೈಲ್ವೆ ನಿಲ್ದಾಣ ಕಟ್ಟಡ ಕುಸಿತದಲ್ಲಿ ಸಿಲುಕಿದ ಮೂವರು ಮಹಿಳಾ ಪೊಲೀಸ್ ಪೇದೆಗಳು

ಹುಬ್ಬಳ್ಳಿ ರೈಲ್ವೆ ನಿಲ್ದಾಣ ಕಟ್ಟಡ ಕುಸಿತದಲ್ಲಿ ಸಿಲುಕಿದ ಮೂವರು ಮಹಿಳಾ ಪೊಲೀಸ್ ಪೇದೆಗಳು
ಹುಬ್ಬಳ್ಳಿ , ಸೋಮವಾರ, 8 ಫೆಬ್ರವರಿ 2016 (16:29 IST)
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದಲ್ಲಿರುವ  ರೈಲ್ವೆ ನಿಲ್ದಾಣವೊಂದರ ಕಟ್ಟಡ ಕುಸಿದ ಪರಿಣಾಮವಾಗಿ ಮೂವರು ಮಹಿಳಾ ಪೊಲೀಸ್ ಪೇದೆಗಳು ಕಟ್ಟಡದೊಳಗೆ ಸಿಲುಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕಟ್ಟಡದಲ್ಲಿ ಪೊಲೀಸ್ ಠಾಣೆ ಮತ್ತು ಪಾರ್ಸಲ್‌ ಸಂಗ್ರಹಣೆಗಾಗಿ ಉಪಯೋಗಿಸಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಹಳೆಯ ಕಟ್ಟಡವೊಂದು ನೆಲಸಮ ಮಾಡುವಾಗ ಈ ಘಟನೆ ಸಂಬಂಧಿಸಿದ್ದು ಓರ್ವ ಪೊಲೀಸ್ ಪೇದೆ ಎದೆಗೆ ಕಲ್ಲುಗಳು ಬಡೆದಿವೆ. ಕೂಡಲೇ ಹತ್ತಿರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.  
 
ಕಟ್ಟಡ ಕಂಪಿಸುತ್ತಿರುವ ಹಿನ್ನೆಲೆಯಲ್ಲಿ ಜೆಸಿಬಿ ಬಳಕೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರು ಶಾಂತ ರೀತಿಯಿಂದ ಸಹಕಾರ ನೀಡುವಂತೆ ಪೊಲೀಸರು ಕೋರಿದ್ದಾರೆ. ರೈಲ್ವೆ ನಿಲ್ದಾಣದ ಪಾರ್ಸಲ್ ವಿಭಾಗದ ಕಚೇರಿ ಸಂಪೂರ್ಣವಾಗಿ ಕುಸಿತಗೊಂಡಿದೆ ಎನ್ನಲಾಗಿದೆ.
 
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು ಅಗತ್ಯವಾದ ಸಹಕಾರ ನೀಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada