Select Your Language

Notifications

webdunia
webdunia
webdunia
webdunia

ರಾಜಕೀಯ ಮಾಡಲು ಬೇರೆ ವೇದಿಕೆಗಳಿವೆ: ಶೆಟ್ಟರ್ ವಿರುದ್ಧ ಕೃಷಿ ಸಚಿವರ ಕೆಂಗಣ್ಣು

ರಾಜಕೀಯ ಮಾಡಲು ಬೇರೆ ವೇದಿಕೆಗಳಿವೆ: ಶೆಟ್ಟರ್ ವಿರುದ್ಧ ಕೃಷಿ ಸಚಿವರ ಕೆಂಗಣ್ಣು
ಬೆಂಗಳೂರು , ಗುರುವಾರ, 30 ಜುಲೈ 2015 (13:53 IST)
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದ್ದು, ಸರ್ಕಾರ ಪರಿಹಾರ ವಿತರಣಾ ಕಾರ್ಯದಲ್ಲಿ ತಾರತಮ್ಯ ಎಸಗುತ್ತಿದೆ ಎಂದು ವಿರೋಧ ಪಕ್ಷ ನಾಯಕ ಶೆಟ್ಟರ್ ಆರೋಪಿಸಿದ ಹಿನ್ನೆಲೆಯಲ್ಲಿ ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ಇಂದು ಸದನದಲ್ಲಿ ಗರಂ ಆಗಿದ್ದು, ರಾಜಕೀಯ ಮಾಡಲು ವಿವಿಧ ವೇದಿಕೆಗಳಿದ್ದು, ಇಲ್ಲಿ ಬೇಡ. ರೈತರ ವಿಚಾರದಲ್ಲಿ ಪ್ರತಿಪಕ್ಷಗಳೂ ಕೂಡ ಸರ್ಕಾರದೊಂದಿಗೆ ಕೈಜೊಡಿಸಲಿ ಎಂದು ಖಾರವಾಗಿ ಗುಡುಗಿದ್ದಾರೆ. 
 
ನಗರದ ವಿಧಾನಸೌಧದಲ್ಲಿ ರಾಜ್ಯದ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಲೋಕಾಯುಕ್ತ ಕಾಯಿದೆ ತಿದ್ದುಪಡಿ ವಿಧೇಯಕ ಸಂಬಂಧ ಚರ್ಚಿಸಲು ಕಲಾಪ ನಡೆಸಲಾಗುತ್ತಿದೆ. ಈ ವೇಳೆ ಸದನದಲ್ಲಿ ಮಾತನಾಡಿದ ವಿಧಾನಸಭಾ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆತ್ಮಹತ್ಯೆಯನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗುತ್ತಿದೆ ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ನೀಡಲಾಗುತ್ತಿರುವ ಪರಿಹಾರ ಕಾರ್ಯದಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಇತರೆ ರೈತರಿಗೆ ಸಿಕ್ಕಂತೆ ದಾಳಿಂಬೆ, ಹತ್ತಿ ಬೆಳೆ ಬೆಳೆಯುತ್ತಿದ್ದ ಮೃತ ರೈತರಿಗೆ ಪರಿಹಾರ ಸಿಗುತ್ತಿಲ್ಲ ಎಂದು ಆರೋಪಿಸಿದರು. 
 
ಇದಕ್ಕೆ ಉತ್ತರಿಸಿದ ಕೃಷಿ ಸಚಿವ ಕೃಷ್ಣಭೈರೇಗೌಡ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ ಎಂಬುದು ಸತ್ಯ. ನಿಲ್ಲಿಸಲು ಸರ್ತಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಪರಿಹಾರ ಕಾರ್ಯದಲ್ಲಿ ತಾರತಮ್ಯ ಮಾಡಲಾಗುತ್ತಿಲ್ಲ. ವೈದ್ಯರು ಹಾಗೂ ಪೊಲೀಸರಿಂದ ವರದಿ ಬರುವುದು ತಡವಾದ ಕಾರಣ ಪರಿಹಾರ ನೀಡುವಲ್ಲಿ ಕೊಂಚ ವಿಳಂಬವಾಗಿದೆಯಷ್ಟೇ. ಇದನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಬೇಡ. ಹಾಗೆಂದಾದಲ್ಲಿ ಅದಕ್ಕೆಂದೇ ಬೇರೆ ವೇದಿಕೆಗಳಿವೆ. ಆದರೆ ರೈತರ ವಿಷಯದಲ್ಲಿ ರಾಜಕೀಯ ಮಾಡದೇ ಸರ್ಕಾರದೊಂದಿಗೆ ಕೈಜೋಡಿಸಿ ಎಂದು ಉದ್ರಿಕ್ತರಾಗಿ ನುಡಿದರು.   

Share this Story:

Follow Webdunia kannada