Select Your Language

Notifications

webdunia
webdunia
webdunia
webdunia

ದಲಿತ ಸಿಎಂ ವಿಚಾರ ಅಪ್ರಸ್ತುತ, ಅಕಾಲಿಕ: ಸಿದ್ದಲಿಂಗಯ್ಯ

ದಲಿತ ಸಿಎಂ ವಿಚಾರ ಅಪ್ರಸ್ತುತ, ಅಕಾಲಿಕ: ಸಿದ್ದಲಿಂಗಯ್ಯ
ಬೆಂಗಳೂರು , ಬುಧವಾರ, 4 ಮಾರ್ಚ್ 2015 (15:14 IST)
ದಲಿತರಿಗೆ ಸಿಎಂ ಪಟ್ಟ ನೀಡಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಕವಿ ಸಿದ್ದಲಿಂಗಯ್ಯನವರು ಇಂದು ಪ್ರತಿಕ್ರಿಯಿಸಿದ್ದು, ದಲಿತರಿಗೆ ಸಿಎಂ ಸ್ಥಾನ ನೀಡಬೇಕೆಂಬುದು ಅಕಾಲಿಕ ಹಾಗೂ ಅಪ್ರಸ್ತುತ ಎನ್ನುವ ಮೂಲಕ ದಿಗ್ಬ್ರಮೆ ಮೂಡಿಸಿದ್ದಾರೆ.  
 
ನಗರದಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಅವರು ಬಳಿಕ 
 
ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು. ಈ ವೇಳೆ, ರಾಜ್ಯದಲ್ಲಿ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯುತ್ತಿದ್ದಾರೆ. ಅಲ್ಲದೆ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ. ಅಷ್ಟೇಅಲ್ಲದೆ ಬಡವರ, ಬಲ್ಲಿದರಿಗೆ ದನಿಗೂಡಿಸುತ್ತಾ ಉತ್ತಮವಾಗಿ ಸ್ಪಂಧಿಸುತ್ತಿದ್ದಾರೆ ಮತ್ತೇನು ಬೇಕು ಎಂದು ಪ್ರಶ್ನಿಸಿದ ಅವರು, ಸಣ್ಣ ಪುಟ್ಟ ವಾಮನಸ್ಸಿದ್ದಲ್ಲಿ ಬಗೆಹರಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದಲಿತರಿಗೆ ಸಿಎಂ ಸ್ಥಾನವನ್ನು ನೀಡಬೇಕು ಎಂಬ ವಿಷಯ ಅಪ್ರಸ್ತುತ ಹಾಗೂ ಅಕಾಲಿಕ ಎಂದರು. 
 
ಇದೇ ವೇಳೆ, ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ತಮ್ಮೊಂದಿಗೆ ಸಕಾರಾತ್ಮಮಕವಾಗಿ ಪ್ರತಿಕ್ರಿಯಿಸಿದರು ಎಂದರು.  

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಹಲವು ಸಂಘಟನೆಗಳ ಮುಖಂಡರು ಕಳೆದ ಹಲವು ದಿನಗಳಿಂದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು, ಕಾಂಗ್ರೆಸ್ ನಲ್ಲಿ ದಲಿತ ನಾಯಕರೂ ಇದ್ದು, ಅವರೂ ಕೂಡ ಸಿಎಂ ಸ್ಥಾನಕ್ಕೆ ಸಮರ್ಥರು ಈ ಹಿನ್ನೆಲೆಯಲ್ಲಿ ಅವರಿಗೆ ಸಿಎಂ ಸ್ಥಾನ ನೀಡಬೇಕೆಂದು ಪರೋಕ್ಷವಾಗಿ ತಮ್ಮ ನಾಯಕ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಂ ಸ್ಥಾನಕ್ಕೇರಿಸಲು ಸಾಕಷ್ಟು ಕಸರತ್ತುಗಳು ನಡೆಸುತ್ತಿದ್ದರು. 
 
ಈ ಹಿನ್ನೆಲೆಯಲ್ಲಿ ನೀವೂ ಕೂಡ ದಲಿತರಾಗಿದ್ದು, ಸಿಎಂ ಸ್ಥಾನವನ್ನು ದಲಿತರಿಗೆ ನೀಡಬೇಕು ಎಂಬ ಬಗ್ಗೆ ತಮ್ಮ ಅಭಿಪ್ರಾಯವೇನು ಎಂಬ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕವಿ ಸಿದ್ದಲಿಂಗಯ್ಯ ಈ ರೀತಿಯಾಗಿ ಉತ್ತರಿಸಿದ್ದಾರೆ.

Share this Story:

Follow Webdunia kannada