Webdunia - Bharat's app for daily news and videos

Install App

ಎಟಿಎಂ ಒಡೆದು 2ಲಕ್ಷಕ್ಕೂ ಹೆಚ್ಚು ಹಣ ದೋಚಿದ ಮುಸುಕುಧಾರಿಗಳು

Webdunia
ಮಂಗಳವಾರ, 21 ಏಪ್ರಿಲ್ 2015 (13:14 IST)
ಎಟಿಎಂ ಹಿಂಬದಿಯ ಹಣ ತುಂಬಿಡುವ ಕಪಾಟನ್ನು ಒಡೆದು 2 ಲಕ್ಷಕ್ಕೂ ಹೆಚ್ಚು ಹಣ ದರೋಡೆ ಮಾಡಿದ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ಸೋಮವಾರ ನಡೆದಿದೆ. 
 


 
ಸೋಮವಾರ ಮಧ್ಯರಾತ್ರಿ ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಎಂಬ ಗ್ರಾಮದಲ್ಲಿನ ಗೋಣಿಕೊಪ್ಪ - ಹುಣಸೂರು ಮುಖ್ಯರಸ್ತೆಯಲ್ಲಿರುವ ಇಂಡಿಯನ್ ಓವರ್‍‌ಸೀಸ್ ಬ್ಯಾಂಕ್‍ನ ಎಟಿಎಂಗೆ ನುಗ್ಗಿದ ಮುಸುಕುಧಾರಿಗಳು ಈ ಕುಕೃತ್ಯವನ್ನು ನಡೆಸಿದ್ದಾರೆ.
 
ದರೋಡೆ ಮಾಡಿದ ದೃಶ್ಯಗಳು ಎಟಿಎಂ ಕೇಂದ್ರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಎಟಿಎಂನಲ್ಲಿರುವ  ಸುಮಾರು 2.67 ಲಕ್ಷ ರೂಪಾಯಿ ಇತ್ತೆಂದು ಹೇಳಲಾಗುತ್ತಿದೆ.  
 
ಪಿರಿಯಾ ಪಟ್ಟಣ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಬಂದು ತಪಾಸಣೆ ನಡೆಸಿದ್ದಾರೆ.
 
ಪಂಚವಳ್ಳಿ ಗ್ರಾಮವಾಗಿದ್ದರಿಂದ ಅಲ್ಲಿ ಸೆಕ್ಯೂರಿಟಿ ಗಾರ್ಡ್ ಅವಶ್ಯಕವಿಲ್ಲವೆಂದು ಬಗೆದ ಬ್ಯಾಂಕಿನವರು ಸೆಕ್ಯೂರಿಟಿ ಗಾರ್ಡ್‍ನನ್ನು ನೇಮಕಮಾಡಿರಲಿಲ್ಲ ಎಂದು ತಿಳಿದು ಬಂದಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments