Select Your Language

Notifications

webdunia
webdunia
webdunia
webdunia

ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಶಬ್ದವೇ ಇಲ್ಲ: ಮೊಯ್ಲಿ ವಿವಾದಿತ ಹೇಳಿಕೆ

ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಶಬ್ದವೇ ಇಲ್ಲ: ಮೊಯ್ಲಿ ವಿವಾದಿತ ಹೇಳಿಕೆ
ಬೆಂಗಳೂರು , ಭಾನುವಾರ, 21 ಸೆಪ್ಟಂಬರ್ 2014 (15:15 IST)
ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಶಬ್ದ ಇಲ್ಲ ಎಂದು ಮಾಜಿ ಸಚಿವ ವೀರಪ್ಪ ಮೊಯ್ಲಿ ಬೆಂಗಳೂರಿನಲ್ಲಿ ಅಭಿಪ್ರಾಯ ಪಟ್ಟರು. ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅವರು ಮಾತನಾಡುತ್ತಿದ್ದರು.

 ವೇದ, ಉಪನಿಷತ್ತಿನಲ್ಲೂ ಹಿಂದೂ ಶಬ್ದ ಬರೆದಿಲ್ಲ. ಜನಾಂಗಗಳನ್ನು ಪ್ರತ್ಯೇಕಿಸಲು ಹಿಂದೂ ಶಬ್ದವನ್ನು ಬಳಕೆ ಮಾಡಲಾಗಿದೆ. ಮಹಮದೀಯ ಮತ್ತೊಂದು ಜನಾಂಗ ಪ್ರತ್ಯೇಕ ಎಂದು ಮೊಯ್ಲಿ ಹೇಳಿದರು.

 ಇದರಿಂದ ಭಾರತೀಯರ ಸ್ವಾಭಿಮಾನಕ್ಕೆ ಅಪಾಯವಿದೆ. ಭಾರತೀಯ ಸಂಸ್ಕೃತಿಯ ಮಣ್ಣಿನಲ್ಲಿ ಹಿಂದೂ ಶಬ್ದ ಹುಟ್ಟಿಲ್ಲ. ಭಾಷೆ, ಸಂಸ್ಕತಿ ಇತಿಹಾಸದಲ್ಲಿ ಹುಟ್ಟಿದ ಅಪಶಬ್ದ, ಅಪಶಬ್ದವನ್ನು ಸರಿ ಎಂದು ಬಳಸಿಕೊಂಡರೆ ಅದು ದೊಡ್ಡ ತಪ್ಪು ಎಂದು ಶಿವಮೂರ್ತಿ ಮುರುಘಾ ಶರಣರ ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು. 
 

Share this Story:

Follow Webdunia kannada