Select Your Language

Notifications

webdunia
webdunia
webdunia
webdunia

ಶ್ರೀ ರಾಮ-ಕೃಷ್ಣರು ಮಾಂಸಾಹಾರಿಗಳು ಎನ್ನುವುದಕ್ಕೆ ಸ್ಪಷ್ಟ ಆಧಾರವಿಲ್ಲ: ಪೇಜಾವರ್ ಶ್ರೀ

ಶ್ರೀ ರಾಮ-ಕೃಷ್ಣರು ಮಾಂಸಾಹಾರಿಗಳು ಎನ್ನುವುದಕ್ಕೆ ಸ್ಪಷ್ಟ ಆಧಾರವಿಲ್ಲ: ಪೇಜಾವರ್ ಶ್ರೀ
ಉಡುಪಿ , ಗುರುವಾರ, 20 ಅಕ್ಟೋಬರ್ 2016 (18:13 IST)
ಶ್ರೀ ರಾಮ-ಕೃಷ್ಣರು ಮಾಂಸಾಹಾರ ಸ್ವೀಕರಿಸುತ್ತಿದ್ದರು ಎನ್ನುವುದಕ್ಕೆ ಸ್ಪಷ್ಟ ಆಧಾರವಿಲ್ಲ ಎಂದು ಪೇಜಾವರ ಮಠದ ಶ್ರೀಗಳು ಹೇಳಿದರು. 
 
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ರಾಮ-ಕೃಷ್ಣರು ಮಾಂಸಾಹಾರಿಗಳು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಸಚಿವ ಪ್ರಮೋದ್ ಮಧ್ವರಾಜ್‌ಗೆ ಮಠ-ಧರ್ಮದ ಬಗ್ಗೆ ಅಪಾರ ಗೌರವವಿದೆ. ಕೃಷ್ಣ ಭಕ್ತರಾಗಿರುವ ಅವರಲ್ಲಿ ವಿಶೇಷ ಭಕ್ತಿಯಿದೆ ಎಂದು ಹೇಳಿದರು. 
 
ಕ್ಷತ್ರಿಯರು ಮಾಂಸ ತಿನ್ನುತ್ತಿದ್ದರು. ಆದರೆ, ಶ್ರೀ ರಾಮ-ಕೃಷ್ಣರು ಏನು ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಲು ಬರುವುದಿಲ್ಲ. ವಾಲ್ಮೀಕಿ ಬೇಡರಾಗಿರುವಾಗ ಮಾಂಸಾಹಾರ ಸ್ವೀಕರಿಸಿರಬಹುದು. ಆದರೆ, ತಪಸ್ವಿಗಳಾದ ಮೇಲೆ ಮಾಂಸಹಾರ ಸ್ವೀಕರಿಸಿರಲಿಲ್ಲ. ಮಾಂಸಾಹಾರ ಸ್ವೀಕಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಗೋ ಮಾಂಸ ಸ್ವೀಕಾರ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದು ಪೇಜಾವರ್ ಮಠದ ಶ್ರೀಗಳು ಹೇಳಿದರು. 
 
ವಾಲ್ಮೀಕಿ ಜಯಂತಿ ಆಚರಣೆಯ ವೇಳೆ ಮಾತನಾಡಿದ ಸಚಿವ ಪ್ರಮೋದ್ ಮಧ್ವರಾಜ್‌, ದೇಶದಲ್ಲಿ ಆಹಾರ ಸೇವನೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಶ್ರೀ ರಾಮ-ಕೃಷ್ಣರು ಮಾಂಸಾಹಾರ ಸೇವಿಸುತ್ತಿದ್ದರು. ಬೇಕಿದ್ದರೇ ಈ ಕುರಿತು ಚರ್ಚೆ ನಡೆಯಲಿ ಎಂದು ಹೇಳಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕಾಲುವೆ ಒತ್ತುವರಿ: ಶಾಮನೂರ್ ಒಡೆತನದ ಆಸ್ಪತ್ರೆ ತೆರವಿಗೆ ಹೈಕೋರ್ಟ್ ತಡೆಯಾಜ್ಞೆ