ಇನ್ನು ವಿಜಯಪುರದಲ್ಲಿ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮಸ್ಥರು ಮಳೆಗಾಗಿ ಹೂತಿದ್ದ ಶವಕ್ಕೆ ನೀರು ಹಾಕಿದ್ದಾರೆ.
ಗ್ರಾಮದ ವಾಗೀಶ ಹಿರೇಮಠ ಅವರ ನೇತೃತ್ವದಲ್ಲಿ ಹೂತಿದ್ದ ಶವದ ಮೇಲೆ ಗ್ರಾಮಸ್ಥರು ನೀರು ಹಾಕಿದ್ದಾರೆ.
ಕಳೆದ ವರ್ಷವೂ ಇದೇ ರೀತಿ ಗ್ರಾಮದಲ್ಲಿ ಹೂತಿದ್ದ ಶವದ ಮೇಲೆ ನೀರು ಹಾಕಿದ್ದರು. ಕಾಕತಾಳೀಯವೆಂಬಂತೆ ಆಗ ಸ್ವಲ್ಪ ಮಳೆಯಾಗಿತ್ತು. ಈ ಬಾರಿಯೂ ಶವದ ಮೇಲೆ ನೀರು ಹಾಕಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿದ್ದಾರೆ.