26 ವಾರಗಳ ಗರ್ಭಿಣಿಯೊಬ್ಬರಿಗೆ ಈ ಹಿಂದೆ ಗರ್ಭಪಾತಕ್ಕೆ ಅನುವು ಮಾಡಿಕೊಟ್ಟು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಬೇಕೆಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ತ್ರಿಸದಸ್ಯ ಪೀಠ, 26 ವಾರಗಳ ಕಾಲ ಮಗುವನ್ನು ಹೊಟ್ಟೆಯಲ್ಲಿರಿಸಿಕೊಂಡ ಮಹಿಳೆಗೆ ಸ್ವಲ್ಪ ಕಾಯಲು ಸಾಧ್ಯವೇ ಕೇಳಿ ಎಂದು ಆಧೇಶವನ್ನು ಹೊರಡಿಸಿದೆ.