Webdunia - Bharat's app for daily news and videos

Install App

ರಾಜ್ಯ ಸರ್ಕಾರ ಶೇ10ಕ್ಕಿಂತ ಅಧಿಕ ಕಮಿಷನ್‌ ಸರ್ಕಾರ– ಮೋದಿ

Webdunia
ಸೋಮವಾರ, 19 ಫೆಬ್ರವರಿ 2018 (19:51 IST)
ರಾಜ್ಯ ಸರ್ಕಾರ ಶೇ 10ರಷ್ಟು ಕಮಿಷನ್ ಪಡೆಯುವ ಸರ್ಕಾರವಲ್ಲ, ಅದಕ್ಕಿಂತಲೂ ಹೆಚ್ಚಿನ ಕಮಿಷನ್ ಪಡೆಯುವ ಸರ್ಕಾರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಮೈಸೂರಿನಲ್ಲಿ ರಾಜಸ್ತಾನದ ಉದಯಪುರ ಮತ್ತು ಮೈಸೂರು ನಡುವಿನ ಹಮ್ ಸಫರ್ ರೈಲಿಗೆ ಚಾಲನೆ ನೀಡಿದ ನಂತರ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಾನು ಬೆಂಗಳೂರಿನಲ್ಲಿ ರಾಜ‌್ಯ ಸರ್ಕಾರ ಶೇ 10ರ ಕಮಿಷನ್ ಸರ್ಕಾರ ಎಂದು ಹೇಳಿದ್ದೆ. ಆದರೆ, ನನಗೆ ಅನೇಕರು ಸಂದೇಶ ಕಳಿಸಿ, ಕರೆಮಾಡಿ ಕಾಂಗ್ರೆಸ್ ಸರ್ಕಾರ ಶೇ10ಕ್ಕಿಂತ ಅಧಿಕ ಕಮಿಷನ್ ಪಡೆಯುತ್ತಿದೆ ಎಂದು ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
 
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಷ್ಟು ದಿನ ಹೊಸ ರೀತಿಯ ಭ್ರಷ್ಟಾಚಾರಗಳು ಹೊರಗಡೆ ಬರುತ್ತಿವೆ. ಅಧಿಕಾರ ಇರುವಷ್ಟು ದಿನವೂ ರಾಜ್ಯವನ್ನು ಹಾಳು ಮಾಡುತ್ತಿದೆ. ದೇಶವನ್ನು ಮುನ್ನಡೆಸಲು ಬಿಜೆಪಿ ಸಿದ್ಧವಿದ್ದು, ಮುಂಬರುವ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನ, ಬೆಳ್ಳಿ ಬೆಲೆ ಇಂದು ಶಾಕ್ ಆಗುವಂತಿದೆ

ಅವಧಿಗೂ ಮುನ್ನ ರಾಜೀನಾಮೆ ನೀಡಿದ ಉಪರಾಷ್ಟ್ರಪತಿಗಳು ಯಾರೆಲ್ಲಾ ಇಲ್ಲಿದೆ ಲಿಸ್ಟ್

ಹೆಣ್ಣು ಮಕ್ಕಳು ಬೇಗ ಮುಟ್ಟಾಗುತ್ತಿರುವುದು ಯಾಕೆ: ಖ್ಯಾತ ವೈದ್ಯೆ ಪದ್ಮಿನಿ ಪ್ರಸಾದ್ ಟಿಪ್ಸ್

ಇಂದಿನಿಂದ ಮೂರು ದಿನ ಯಾರ ಕೈಗೂ ಸಿಗಲ್ಲ ಡಿಕೆ ಶಿವಕುಮಾರ್

ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ದಿಡೀರ್ ರಾಜೀನಾಮೆ ಸಲ್ಲಿಸಿದ್ದರ ಹಿಂದಿದೆಯಾ ಬೇರೇ ಕಾರಣ

ಮುಂದಿನ ಸುದ್ದಿ
Show comments