ಲೋಕಸಭೆ ಚುನಾವಣೆ ಸಮೀಪ ಇರುವಂತೆ ಹಾಗೂ ಉಮೇಶ್ ಜಾಧವ್ ಬಿಜೆಪಿಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿಯೇ ಅಸಮಧಾನ ಸ್ಪೋಟಗೊಳ್ಳತೊಡಗಿವೆ.
ಕಲಬುರ್ಗಿ ಜಿಲ್ಲೆಯ ಬಿಜೆಪಿಯಲ್ಲಿ ಅಸಮಧಾನ ಭುಗಿಲೆದ್ದಿದೆ. ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಾಬುರಾವ ಚಹ್ವಾಣ ಹಾಗೂ ಮಾಜಿ ಸಚಿವ ಸುನೀಲ್ ವಲ್ಲಾಪುರೆ ಅವರಿಂದ ಅಸಮಧಾನ ವ್ಯಕ್ತವಾಗತೊಡಗಿದೆ.
ಬಾಬುರಾವ ಚಹ್ವಾಣ ಕಲಬುರಗಿ ಕ್ಷೇತ್ರದ ಎಂ ಪಿ ಟಿಕೆಟ್ ಆಕಾಂಕ್ಷಿ ಇದ್ದಾರೆ.
ಇನ್ನು ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಉಮೇಶ್ ಜಾಧವರ ಚಿಂಚೋಳಿಯ ಬಿಜೆಪಿ ಘಟಕದಲ್ಲಿ ಕೂಡ ಬಂಡಾಯ ಸಾಧ್ಯತೆ ಹೆಚ್ಚಾಗುತ್ತಿದೆ.
ಶಾಸಕ ಉಮೇಶ ಜಾಧವ್ ಬಿಜೆಪಿ ಸೇರ್ಪಡೆ ವಿಚಾರದ ಹಿನ್ನಲೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸುನೀಲ ವಲ್ಲಾಪೂರೆ ಬೆಂಬಲಿಗರ ಸಭೆ ನಡೆದಿರುವುದು ಕುತೂಹಲ ಹುಟ್ಟಿಸಿದೆ. ವಲ್ಲಾಪೂರೆ ನಡೆಸಿರುವ ಸಭೆಯಿಂದಾಗಿ ಹಲವು ಅನುಮಾನಗಳು ಹರಿದಾಡುತ್ತಿವೆ. ಪಕ್ಷದ ವಿರುದ್ದ ಬಂಡಾಯ ಏಳುವ ಸಾಧ್ಯತೆ ದಟ್ಟವಾಗಿವೆ.