Webdunia - Bharat's app for daily news and videos

Install App

ನಕಲಿ ಎಸ್ಪಿಯಾ ಅಸಲಿ ಕಥೆ ನಿಜಕ್ಕೂ ಸಖತ್ ಇಂಟ್ರೆಸ್ಟಿಂಗ್..!

Webdunia
ಶನಿವಾರ, 18 ಮಾರ್ಚ್ 2023 (09:10 IST)
ಪೊಲೀಸ್ ಯೂನಿಫಾರ್ಮ್ , ಪೊಲೀಸ್ ಹೇರ್ ಸ್ಟೈಲ್, ಈತನ ಗತ್ತು ದೌಲತ್ತು ನೋಡಿದ್ರೆ ಎಂತವರು ಕೂಡ ಇವನನ್ನ ಪೊಲೀಸ್ ಅಂದ್ಕೋಳ್ಳಲೇ ಬೇಕು ಬಿಡಿ.. ಅದ್ರೆ ಈ ಪ್ರೋಬೇಷನರಿ ಎಸ್ಪಿಯಾ ಎಜುಕೇಷನ್ ಬ್ಯಾಕ್ ಗ್ರೌಂಡ್ ಏನು..? ಈ ಹಿಂದೆ ಪೊಲೀಸರಿಗೂ ಈತನಿಗೂ ಒಂದು ಅವಿನಾಭಾವ ಸಂಬಂಧ ಇದೆ ಅಸಂಬಂಧ ಏನು..? ಅಷ್ಟಕ್ಕೂ ಈತನ ವಂಚನೆಯ ಸ್ಟೈಲ್ ಬಗ್ಗೆ ಕೇಳಿದ್ರೆ ನಿಜಕ್ಕೂ ನೀವು ಶಾಕ್ ಅಗ್ತೀರಾ.ಪೋಸ್ ನೋಡಿ ನಿಜವಾಗ್ಲೂ ಐಪಿಎಸ್ ಅಂದ್ಕೊಂಡ್ರಾ..? ನೀವೇನೂ ಠಾಣೆಯಲ್ಲಿ ಕೆಲಸ ಮಾಡೋ ಅದೆಷ್ಟೋ ಪೊಲೀಸರೇ ಈತನನ್ನ ಐಪಿಎಸ್ ಅಧಿಕಾರಿ ಅಂದ್ಕೊಂಡು ಸೆಲ್ಯೂಟ್ ಕೂಡ ಹೊಡೆದಿದ್ದಾರೆ ಬಿಡಿ.. ಅದ್ರೆ ಈತ ನಿಜವಾದ ಪ್ರೊಬೆಷನರಿ ಎಸ್ಪಿ ಅಂತೂ ಅಲ್ಲ ಬಿಡಿ...ನಗರದಲ್ಲಿ ಹೀಗೆ ಐಪಿಎಸ್ ಅಧಿಕಾರಿ ಅಂತಾ ಓಡಾಡ್ಕೊಂಡು ವಂಚನೆ ಮಾಡ್ತಿದ್ದ ಅಸಾಮಿ ಹೆಸರು ಶ್ರೀನಿವಾಸ್ ಅಂತಾ ..ವೆಂಕಟ ನಾರಾಯಣ ಎನ್ನುವವರಿಗೆ ನಾನು ಎಸ್ಪಿ ಎಂದು ವಂಚಿಸಿ 2.5 ಕೋಟಿ ರೂಪಾಯಿಯನ್ನ ಪಡೆದು ಎಸ್ಕೇಪ್ ಅಗಿದ್ದ.

ವೆಂಕಟನಾರಾಯಣ ಅವರ ದೂರಿನ ಮೇರೆಗೆ ಶ್ರೀನಿವಾಸ್ ನನ್ನ ತಲಘಟ್ಟಪುರ ಪೊಲೀಸರು ಬಂಧಿಸಿದ್ರೂ.. ಈ ಕಳ್ಳ ಎಸ್ಪಿ ಶ್ರೀನಿವಾಸನ ವಿಚಾರಣೆ ವೇಳೆ ಹಲವು ಇಂಟ್ರೆಸ್ಟಿಂಗ್ ಸಂಗತಿಗಳು ಬೆಳಕಿಗೆ ಬಂದಿದೆ... ಈಗ ಎಸ್ಪಿ ಅಂದ್ರೆ ಡಿಗ್ರಿಯಾಗಿ ಯುಪಿಎಸ್ಸಿ ಪರೀಕ್ಷೆ ಪಾಸಾಗಿರ ಬೇಕು.. ಅದ್ರೆ ಈ ಕಳ್ಳ ಶ್ರೀನಿವಾಸನ ಎಜುಕೇಷನ್ ಕೇಳಿ ಪೊಲೀಸರೇ ಸುಸ್ತಾಗಿದ್ದಾರೆ.. ಹೌದು ಕಣ್ರೀ ಈತ ಪಿಯುಸಿ ಫೇಲ್.. ಅದ್ರೆ ಈತನ ಮ್ಯಾನರಿಸಂ ನೋಡಿದ್ರೆ ಐಪಿಎಸ್ ಅಧಿಕಾರಿ ಅಂತಾ ಯಾರಾದ್ರೂ ಹೇಳಲೇ ಬೇಕು.. ಅಷ್ಟಕ್ಕೂ ಈ ಮ್ಯಾನರೀಸಂ, ಅಟಿಟ್ಯೂಡ್ ಬಂದಿದ್ದು ಹೇಗೆ ಅಂತಾ ಕೇಳಿದ್ರೆ ನೀವೂ ಇನ್ನೂ ಶಾಕ್ ಅಗ್ತೀರಾ.. ಈ ಶ್ರೀನಿವಾಸ ಒದಾನೊಂದು ಕಾಲದಲ್ಲಿ ದೊಡ್ಡ ಕಳ್ಳ ಅಂತೆ.

ಕಳ್ಳತನ ಮಾಡಿ ಶ್ರೀ ಕೃಷ್ಣನ ಜನ್ಮ ಸ್ಥಳಕ್ಕೂ ಹೋಗಿ ಬಂದಿದ್ದ.. ಪೊಲೀಸ್ ಕಸ್ಟಡಿಯಲ್ಲಿರುವಾಗ ಐಪಿಎಸ್ ಅಧಿಕಾರಿಗಳ ಗತ್ತು, ಅವರ ಮ್ಯಾನರೀಸಮ್ ನೋಡಿ ಅದನ್ನ ಕಲಿತಿದ್ದ..ಯೂನಿಫಾಮ್ ಹಾಕಿಕೊಂಡು ಠಾಣೆಗೂ ಕೂಡ ಹೋಗ್ತಿದ್ನಂತೆ..ಠಾಣೆಗೆ ಹೋದಾಗ ಪಿಸಿಗಳಿಗೆ ಈತನೇ ಸೆಲ್ಪಿ ತೆಗೆದುಕೊಳ್ಳುವಂತೆ ಹೇಳ್ತಿದ್ದ..ಅವರಿಂದ ಸ್ಟೇಟಸ್ ಹಾಕಿಸಿಕೊಂಡು ಅದನ್ನ ಬೇರೆಯವರಿಗೆ ತೋರಿಸಿ ಯಾಮಾರಿಸುತ್ತಿದ್ದ..ಇವರೆಲ್ಲ ನನ್ನ ಶಿಷ್ಯರು ನಾನು ಹೇಳಿದ್ದನ್ನ ಕೇಳ್ತಾರೆ ಅಂತಾ ಹೇಳಿ ಬೇರೆಯವರಿಗೆ ಟೋಫಿ ಹಾಕ್ತಿದ್ದ.. ಅಷ್ಟೇ ಅಲ್ಲ ರಿಯಲ್ ಎಸ್ಟೇಟ್ ಬ್ಯುಸ್ ನೆಸ್ ಮೆನ್ ಗಳಿಗೆ ಗಾಳ ಹಾಕ್ತಿದ್ದ ಲಿಟಿಗೇಷನ್ ಲ್ಯಾಂಡ್ ಗಳನ್ನ ನಿಮಗೆ ಮಾಡಿಕೊಡುವುದಾಗಿ ಹೇಳಿ ಅವರಿಗೆ ಪಂಗನಾಮ ಹಾಕ್ತಿದ್ದ.

ಇನ್ನೂ ಮುಂದುವರೆದು ಈತನಿಗೆ ಒಬ್ಳೂ ಗರ್ಲ್ ಫ್ರೆಂಡ್ ಕೂಡ ಇದ್ಲಂತೆ..ಗರ್ಲ್ ಫ್ರೆಂಡ್ ಮನೆ ರಿನೋವೇಶನ್ ಗಾಗಿ ಈ ಹಣ ಖರ್ಚು ಮಾಡಿದ್ನಂತೆ..ಅಷ್ಟೇ ಅಲ್ಲದೇ ಬಿಎಂಡ್ಲೂ ಬೈಕ್ ಒಂದನ್ನ ಕೂಡ ತನಗಾಗಿ ಖರೀದಿಸಿದ್ದ.. ಒಟ್ಟಾರೆ ನಕಲಿ ಎಸ್ಪಿಯ ಅಸಲಿ ಆಟ ಕೇಳಿ ಪೊಲೀಸರೇ ಸುಸ್ತಾಗಿದ್ದಾರೆ .ಯಾವುದಕ್ಕೂ ನೀವು  ಯಾರನ್ನಾದರೂ ನಂಬೋ ಮೊದಲು ಯೋಚನೆ ಮಾಡಿ ಇಲ್ಲ ಅಂದ್ರೆ ಇಂತಹ ಅಸಾಮಿಗಳು ಟೋಫಿ ಹಾಕ್ತನೆ ಇರ್ತಾರೆ.ಬಿ ಕೇರ್ ಫೂಲ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಮ್ಮು ಕಾಶ್ಮೀರ ಮೇಘಸ್ಫೋಟದಲ್ಲಿ 33ಮಂದಿ ಸಾವು: ಅತ್ಯಂತ ದುರಂತ ಸುದ್ದಿ, ದ್ರೌಪದಿ ಮುರ್ಮು

79ನೇ ಸ್ವಾತಂತ್ರ್ಯ ದಿನಾಚರಣೆ: ನಾಳೆ ರಾಷ್ಟ್ರ ರಾಜಧಾನಿ ಹವಾಮಾನದಲ್ಲಿ ಭಾರೀ ಬದಲಾವಣೆ

ರಾಹುಲ್ ಗಾಂಧಿ ಸಂವಿಧಾನವನ್ನೇ ಓದಿಲ್ಲ: ಕಿರಣ್‌ ರಿಜಿಜು ಆಕ್ರೋಶ

ಪತಿ ಸಾವಿಗೆ ನ್ಯಾಯ ಸಿಕ್ಕಿದ್ದಕ್ಕೆ ಯೋಗಿಯನ್ನು ಕೊಂಡಾಡಿದ್ದೆ ತಪ್ಪಾಯ್ತು, ಎಸ್‌ಪಿ ಶಾಸಕಿ ಪಕ್ಷದಿಂದಲೇ ಹೊರಕ್ಕೆ

ಆಪರೇಷನ್ ಸಿಂಧೂರ್‌ ಕಾರ್ಯಚರಣೆಯ ಕೆಚ್ಚೆದೆಯ 9 ವೀರರಿಗೆ ವೀರ ಚಕ್ರ ಪ್ರಶಸ್ತಿ

ಮುಂದಿನ ಸುದ್ದಿ
Show comments