Webdunia - Bharat's app for daily news and videos

Install App

ಸಕ್ಕರೆ ಪ್ರಿಯರಿಗೆ ಕಹಿ ಸುದ್ದಿ.. ಬೇಳೆ-ಕಾಳು ದುಬಾರಿ

Webdunia
ಭಾನುವಾರ, 27 ಆಗಸ್ಟ್ 2023 (18:50 IST)
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಳೆ ಕಡಿಮೆಯಾಗುತ್ತಿದೆ. ಕಳೆದ ಎರಡು ತಿಂಗಳಿಂದ ಒಂದೊಂದೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಟೊಮೆಟೊ,ಈರುಳ್ಳಿ,ಹೂ,ಹಣ್ಣು ಆಯ್ತು ಈಗ ದಿನಸಿ ಮೇಲೆ‌ ಪೆಟ್ಟು ಬಿದ್ದಿದೆ.ಈಗ ಸಕ್ಕರೆ,ಬೇಳೆ ಸರದಿ ಬಂದಿದೆ.ರಾಜ್ಯದಲ್ಲಿ ಹೆಚ್ಚಿದ ಮಳೆ ಕೊರತೆ ಹಿನ್ನೆಲೆ ಕಬ್ಬು ಬೆಳೆ ಕುಂಠಿತವಾಗಿದೆ. ಜೊತೆಗೆ ಬಿತ್ತನೆ ಸಹ ಕಡಿಮೆಯಾಗಿದೆ. ಇದರ ಪರಿಣಾಮ ಸಕ್ಕರೆ ಬೆಲೆ ಮೇಲೂ ಪೆಟ್ಟು ಬಿದ್ದಿದ್ದು, ಎಲ್ಲ ಬೇಳೆ, ಕಾಳುಗಳ ಬೆಲೆಯೂ ಹೆಚ್ಚಾಗಿದೆ.
 
ಯಾವುದಕ್ಕೆ ಎಷ್ಟು ಬೆಲೆ ಅಂತಾ ನೋಡೋದಾದ್ರೆ
 
ಹೆಸರುಕಾಳು - 130 ರೂ.(ಮೊದಲು 100 ರೂ.)
ತೊಗರಿ ಬೆಳೆ - 165 ರೂ. ( ಮೊದಲು 90 ರೂ.)
ಹೆಸರು ಬೆಳೆ - 110 ರೂ. (ಮೊದಲು 95 ರೂ)
ಬಟಾಣಿ -  90 ರೂ .  (ಮೊದಲು 60 ರೂ)
ಕಬುಲ್ ಕಡ್ಲೆ - 160 ರೂ. (ಮೊದಲು 120 ರೂ.)
ಕಡಲೆ ಕಾಳು - 70 ರೂ . (ಮೊದಲು 60 ರೂ.)
ಗೋಧಿ - 32 ರೂ ( ಮೊದಲು 28 ರೂ.)
ಉದ್ದಿನ ಬೆಲೆ - 110 ರೂ ( ಮೊದಲು 100 ರೂ.)
 
 
 ಮಾರುಕಟ್ಟೆಯಲ್ಲೇ ಹೆಚ್ಚಿನ ಬೆಲೆಗೆ ಸಿಗುತ್ತಿದ್ದು, ನಾವು ತಂದು ಏನು ಮಾರಾಟ ಮಾಡಬೇಕು. ಸಕ್ಕರೆ ಬೆಲೆಯಲ್ಲಿ ಅಷ್ಟು ಪ್ರಭಾವ ಬಿದ್ದಿಲ್ಲ. ಆದ್ರೆ ಬೇಳೆ ಹಾಗೂ ಇತರೆ ವಸ್ತುಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ಇದು ಗ್ರಾಹಕರಿಗೆ ಕೊಂಡುಕೊಳ್ಳಲು ಕಷ್ಟವಾಗುತ್ತೆ. ಆದ್ರೆ ಇದು ನಿತ್ಯ ಅವಶ್ಯಕ ವಸ್ತುಗಳಾಗಿರುವುದರಿಂದ ಖರೀದಿಸಲೇ ಬೇಕು ಅಂತಾ ವ್ಯಾಪಾರಿಗಳು ಹೇಳ್ತಾರೆ
 
 ಆಗಸ್ಟ್‌ ಆರಂಭದಲ್ಲೇ ಮಳೆ ಪ್ರಮಾಣದಲ್ಲಿ ಶೇ. 40ರಷ್ಟು ಕೊರತೆ ಎದುರಾಗಿದೆ. ಅಲ್ಲಲ್ಲಿ ಕೊಂಚ ಸಾಧಾರಣ ಮಳೆ ಆಗಿರೋದು ಬಿಟ್ಟರೆ, ಮಳೆ ಕೊರತೆ ಎದ್ದು ಕಾಣ್ತಾ ಇದೆ. ಮಳೆ ಪ್ರಭಾವದಿಂದ ಬೆಳೆ ಕಡಿಮೆ ಬರುತ್ತಿದ್ರು, ಆಮದು ಮಾತ್ರ ಸರಿಯಾಗಿ‌ ಆಗುತ್ತಿಲ್ಲ. ನಮ್ಮ ಬಳಿಯೇ ಹೆಚ್ಚು ದುಡ್ಡು ಕೊಟ್ಟು ಅಂಗಡಿ ಮಾಲೀಕರು ವಸ್ತುಗಳನ್ನ ಖರೀದಿ ಮಾಡುತ್ತಾರೆ. ಇನ್ನ ಜನರಿಗೆ ಎಷ್ಟು ಲಾಭದಲ್ಲಿ ಮಾರುತ್ತಾರೆ?. ಇದಕ್ಕೆ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಎಪಿಎಂಸಿ ಕಮಿಟಿಯ ಅಧ್ಯಕ್ಷ ಸಾಯಿರಾಮ್ ಪ್ರಸಾದ್ ಹೇಳಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments