ನೆಹರೂ ಅವರ ಡಿಎನ್ ಎ ಪರೀಕ್ಷೆ ಆಗಬೇಕಿದೆ. ಹೀಗಂತ ಶ್ರೀರಾಮ ಸೇನೆ ಮುಖ್ಯಸ್ಥ ವಿವಾದಿತ ಟೀಕೆ ಮಾಡಿದ್ದಾರೆ.
ಗುಜರಾತ್ ನ ಸೋಮನಾಥ ದೇವಾಲಯ ಮಸೀದಿ ಆದಂಗಿದೆ. ಈ ಹಿಂದೆ ಸರ್ದಾರ್ ವಲ್ಲಭಭಾಯ್ ಪಟೇಲ್ ರು ಕೇಂದ್ರ ಗೃಹ ಸಚಿವರಾಗಿದ್ದಾಗ ಈ ಬಗ್ಗೆ ಹೇಳಿಕೆ ನೀಡಿದ್ರು. ಆದರೆ ಅದಕ್ಕೆ ನೆಹರೂ ಒಪ್ಪಲಿಲ್ಲ. ಹೀಗಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ ಲಾಂಛನ ಬಿಡುಗಡೆಗೊಳಿಸಿ ಧಾರವಾಡದಲ್ಲಿ ಮಾತನಾಡಿದ ಮುತಾಲಿಕ್, ಜೈಲಿಗೆ ಹೋಗಿ ಯುವಕರು ಕೇಸ್ ಹಾಕಿಕೊಳ್ಳಬೇಕು. ಧರ್ಮ ಉಳಿಸೋ ಸಲುವಾಗಿ ಜೈಲಿಗೆ ಹೋಗಿ ಬಂದರೆ ನಾವು ಸ್ಟಾರ್ ಕೊಡುತ್ತೇವೆ ಎಂದು ಹೇಳಿದ್ದಾರೆ.